ಮಂಗಳೂರು, ಡಿ 28: ಹೌದು ಒಂದು ಕಾಲದಲ್ಲಿ ಮಂಗಳೂರಿನಲ್ಲಿ ರಾರಾಜಿಸುತ್ತಿದ್ದ ಕ್ಲಾಕ್ ಟವರ್ ಮತ್ತೆ ತನ್ನ ಗತವೈಭವದೊಂದಿಗೆ ತಲೆ ಎತ್ತಲಿದೆ. ಮಂಗಳೂರು ಮೇಯರ್ ಕವಿತಾ ಸನಿಲ್ ಅವರ ಆಗ್ರಹದ ಮೇರೆಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನೂತನ ಕ್ಲಾಕ್ ಟವರ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಈ ಹಿಂದೆ ಪ್ರಸ್ತಾಪಿತ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕ್ಲಾಕ್ ಟವರ್ ರ್ನಿರ್ಮಾಣದ ಬಗ್ಗೆ ಉಲ್ಲೇಖವಿರಲಿಲ್ಲ. ಆ ಬಳಿಕ ನಡೆದ ಸಭೆಯಲ್ಲಿ ಮೇಯರ್ ಅವರ ಒತ್ತಾಯದ ಹಿನ್ನಲೆಯಲ್ಲಿ ಇದನ್ನು ಸೇರಿಸಿಕೊಳ್ಳಲಾಗಿದ್ದು ಇದೀಗ ಸಿದ್ದತೆ ನಡೆಸಲಾಗಿದೆ. ಕ್ಲಾಕ್ ಟವರ್ ಗೆ ಶೀಘ್ರದಲ್ಲಿಯೇ ಶಿಲಾನ್ಯಾಸ ನಡೆಸಲಿದ್ದು ಈ ಯೋಜನೆಗೆ ಸುಮಾರು 90 ಲಕ್ಷ ರೂ ಅಂದಾಜಿಸಲಾಗಿದೆ. ಇನ್ನು ಈ ಯೋಜನೆ ಅದಷ್ಟು ಬೇಗ ಜಾರಿಗೊಳಿಸಬೇಕೆನ್ನುವ ಯೋಚನೆ ಪಾಲಿಕೆ ಇರೋ ಕಾರಣಕ್ಕೆ ಈಗಾಗಲೇ ಇದರ ನೀಲ ನಕ್ಷೆ ಸಿದ್ದಪಡಿಸಿ ಟೆಂಡರ್ ಕರೆದಿದ್ದಾರೆ.
ಈ 21 ಮೀಟರ್ ಎತ್ತರದ ಕ್ಲಾಕ್ ಟವರ್ ನ ಮೇಲಿನ ಭಾಗದಲ್ಲಿ ನಾಲ್ಕು ಬದಿಯಲ್ಲೂ ಬೃಹತ್ ಗಡಿಯಾರಗಳನ್ನು ಅಳವಡಿಸಿಲಾಗುತ್ತದೆ. ಹಾಗೂ ಕೆಳಭಾಗದಲ್ಲಿ ಗಾರ್ಡನ್ ನಿರ್ಮಿಸುವ ಇರಾದೆ ಇದೆ. ಈ ಹಿಂದಿನ ಕ್ಲಾಕ್ ಟವರ್ ಅನ್ನು ರಸ್ತೆ ವಿಸ್ತರಿಸುವ ನೆಪದಲ್ಲಿ ನೆಲಸಮಮಾಡಿದ್ದು ಈಗ ಅದೇ ಜಾಗದಲ್ಲಿ ಮತ್ತೆ ಹೊಸ ಕ್ಲಾಕ್ ಟವರ್ ತಲೆ ಎತ್ತಲಿರುವುದು ನಿಜಕ್ಕೂ ಮಂಗಳೂರಿಗೆ ಖುಷಿ ತಂದಿದೆ.