ಬೆಳ್ಳಾರೆ,ಸೆ 10 (Daijiworld News/RD): ಚಲಿಸುತ್ತಿದ್ದ ರಿಕ್ಷಾದಿಂದ ಮಗು ಬಿದ್ದು ಧಾರುಣ ಸಾವನ್ನಪ್ಪಿದ ಘಟನೆ ಬೆಳ್ಳಾರೆ ಸಮೀಪದ ಮೊಗಪ್ಪೆ ಎಂಬಲ್ಲಿ ಸೋಮವಾರ ಸಂಭವಿಸಿದೆ.
ಕೋಳ್ತಿಗೆ ಗ್ರಾಮದ ಬಾರಿಕೆ ಮನೆ ಪ್ರೇಮ ಎಂಬವರು ತನ್ನ ಜ್ವರ ಪೀಡಿತ 3 ವರ್ಷದ ಮಗು ದೇವಿಕಾಳನ್ನು ಕರೆದುಕೊಂಡು ಔಷಧಕ್ಕೆಂದು ಬಸ್ಸಿನಲ್ಲಿ ಬೆಳ್ಳಾರೆಗೆ ಬಂದಿದ್ದರು. ಔಷಧ ತೆಗೆದುಕೊಂಡು ರಿಕ್ಷಾದಲ್ಲಿ ವಾಪಸ್ ಬರುತ್ತಿದ್ದಾಗ ಮೊಗಪ್ಪೆ ಸಮೀಪ ಮಗು ರಿಕ್ಷಾದಿಂದ ಜಾರಿ ಕೆಳಗೆ ಬಿದ್ದಿದೆ. ಕೂಡಲೇ ಮಗುವನ್ನು ಅದೇ ರಿಕ್ಷಾದಲ್ಲಿ ಬೆಳ್ಳಾರೆ ಖಾಸಗಿ ಕ್ಲಿನಿಕ್ ಗೆ ಕರೆ ತರಲಾಯಿತು. ಆದರೆ ಅಲ್ಲಿಗೆ ತಲುಪುವ ಮೊದಲೇ ಮಗು ಅಸುನೀಗಿತ್ತು.