ಮಂಗಳೂರು ಸೆ,14: ಪುತ್ತೂರು ತಾಲೂಕಿನಲ್ಲಿ ಯುವತಿಯ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 6 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲವು ಸೈನೈಡ್ ಕಿಲ್ಲರ್ ಮೋಹನ್ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಸಲಿದೆ ಕೊಲೆ, ಅತ್ಯಾಚಾರ, ಚಿನ್ನಾಭರಣ ಲೂಟಿ, ಸೈನೈಡ್ ನೀಡಿಕೆ, ಸಾಕ್ಷಿ ನಾಶ ಇತರೆ ಪ್ರಕರಣಗಳು ನ್ಯಾಯಾಲದಲ್ಲಿ ಸಾಬೀತಾಗಿರುವುದರಿಂದ ನ್ಯಾಯಾಧೀಶ ಡಿ.ಪಿ.ಪುಟ್ಟರಂಗ ಸ್ವಾಮಿ, ಅರೋಪಿ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದಾರೆ.
ಮೋಹನ್ ತನ್ನನ್ನು ಆನಂದ ಎಂದು ಯುವತಿಯೊಂದಿಗೆ ಪರಿಚಯಿಸಿ, ಮದುವೆಯಾಗುವುದಾಗಿ ನಂಬಿಸಿ ಭರವಸೆ ನೀಡಿದ್ದ. 2009 ಸೆಪ್ಟೆಂಬರ್ 17 ರಂದು ಯುವತಿಯನ್ನು ಚಿನ್ನಾಭರಣದೊಂದಿಗೆ ಪುತ್ತೂರಿನ ಮಾರ್ಕೆಟ್ ಗೆ ಕರೆಸಿಕೊಂಡಿದ್ದು, ಬಳಿಕ ಆಕೆಯನ್ನು ಮಡಿಕೇರಿಗೆ ಕರೆದೊಯ್ದು ಲೈಂಗಿಕ ಸಂಪರ್ಕ ಭೆಳೆಸಿದ್ದ. ಬಳಿಕ ಮಡಿಕೇರಿ ಬಸ್ ನಿಲ್ದಾಣದಲ್ಲಿ ಮಾತ್ರೆಯ ಹೆಸರಿನಲ್ಲಿ ಸೈನೈಡ್ ನೀಡಿ ಕೊಲೆಗೈದಿದ್ದಾನೆ. ಬಳಿಕ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ. ಪೊಲೀಸರು 44 ಸಾಕ್ಷಿಗಳನ್ನು ವಿಚಾರಿಸಿ 60 ದಾಖಲೆಗಳನ್ನು ನ್ಯಾಯಾಲಕ್ಕೆ ಹಾಜರುಪಡಿಸಿದ್ದರು ಎಂದು ತಿಳಿದು ಬಂದಿದೆ.
20 ಪ್ರಕರಣ, 4ವಿಚಾರಣೆ, 3ರಲ್ಲಿ ಗಲ್ಲು
ಪಾತಕಿ ಮೋಹನ್ ೨೦ ಯುವತಿಯರನ್ನು ಸೈನೈಡ್ ನೀಡಿ ಕೊಲೆ ಮಾಡಿದ ಆರೋಪ ಇದೆ. ಇವುಗಳಲ್ಲಿ ೩ಕೊಲೆ ಪ್ರಕರಣಕ್ಕೆ ಮಂಗಳೂರು ನ್ಯಾಯಲಯ ಮರಣ ದಂಡನೆ ವಿಧಿಸಿದೆ. ಈ ಪ್ರಕರಣ ೪ನೇಯದಾಗಿದ್ದು ಇದರಲ್ಲು ಗಲ್ಲು ಶಿಕ್ಷೆ ವಿಧಿಸುವಂತೆ ನ್ಯಾಯಲಯವನ್ನು ಕೋರಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ನ್ ಓಲ್ಗಾ ಮಾರ್ಗರೇಟ್ ತಿಳಿಸಿದ್ದಾರೆ.