ಮಂಗಳೂರು, ಡಿ 27: ಹೊಸ ವರ್ಷ ಆಚರಣೆಯ ಹೆಸರಿನಲ್ಲಿ 31 ಡಿಸೆಂಬರ್ ರಂದು ನಡೆಯುವ ಡಿ ಜೆ ಪಾರ್ಟಿ, ಅಶ್ಲೀಲ ನೃತ್ಯಗಳಂತಹ ಕಾರ್ಯಕ್ರಮಕ್ಕೆ ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನಲೆಯಲ್ಲಿ ಬಜರಂಗದಳ ಮುಖಂಡರು ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ಅವರನ್ನು ಡಿ 27 ರ ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ನಗರದಲ್ಲಿರುವ ಎಲ್ಲಾ ಬಾರ್, ಪಬ್ ಗಳು ರಾತ್ರಿ 11:00 ಗಂಟೆ ಒಳಗೆ ಮುಚ್ಚಿಸಬೇಕು. ಅಲ್ಲದೇ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಡಿ ಜೆ ಪಾರ್ಟಿ, ಅಶ್ಲೀಲ ನೃತ್ಯ ಮತ್ತು ಮದ್ಯಪಾನ ಪಾರ್ಟಿ ಆಯೋಜನೆ ಮಾಡಿದ್ದು ಇದಕ್ಕೆ ಅನುಮತಿ ನೀಡಬಾರದು. ಈಗಾಗಲೇ ಲವ್ ಜಿಹಾದ್ ಜಿಲ್ಲೆಯಲ್ಲಿ ತೀವ್ರವಾಗಿದ್ದು ಮುಗ್ದ ಹೆಣ್ಣುಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸಲು ಪ್ರಚೋದನೆ ನೀಡಲಾಗುತ್ತಿದೆ. ಈಗಾಗಲೇ ಕೇರಳ ಮತ್ತು ದಕ್ಷಿಣ ಕನ್ನಡ ದಲ್ಲಿ ಕೆಲವೊಂದು ಯುವಕರು ಇಂತಹ ಕೃತ್ಯದಲ್ಲಿ ತೊಡಗಿದ್ದು ಇದರಿಂದಾಗಿ ಡ್ರಗ್ಸ್ ಮಾಫಿಯಾ, ಸೆಕ್ಶ್ ಮಾಫಿಯಾ ಜಾಲ ಹೆಚ್ಚಾಗುತ್ತಿದೆ. ಹೀಗಾಗಿ ಹೊಸವರ್ಷದ ಹೆಸರಿನಲ್ಲಿ ನಡೆಯುವ ಅನಾಚರಗಳಿಗೆ ಬ್ರೇಕ್ ಹಾಕಬೇಕೆಂದು ವಿನಂತಿಸಿತು. ಇದೇ ವೇಳೆ ಬಜರಂಗದಳದ ಪ್ರಾಂತ್ಯ ಸಂಚಾಲಕರಾದ ಶರಣ್ ಪಂಪ್ವೆಲ್ , ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ , ಗೋಪಾಲ್ ಕುತ್ತಾರ್ ಬುಜಂಗ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.