ಮಂಗಳೂರು, ಸೆ 07 (Daijiworld News/MSP): ಜೀವನದಲ್ಲಿ ಬರುವ ಕ್ಷಣಗಳನ್ನು ನಂಬಿ ಬದುಕಬೇಡಿ ಬದಲಾಗಿ ಅದನ್ನು ನಿಮ್ಮದಾಗಿಸಿಕೊಂಡು ಬದುಕಿಎಂದು ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವಕುಮಾರ್ ಮಗದ ಅವರು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.
ಇವರು ಎಕ್ಸ್ಪರ್ಟ್ ಪದವಿ ಪೂರ್ವಕಾಲೇಜು ಸಭಾಂಗಣದಲ್ಲಿ ನಡೆದ ವೃತ್ತಿ ಮಾರ್ಗದರ್ಶನ ಎಜುಪಾತ್ 2019 ಸರಣಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಮನುಷ್ಯ ನಿಜವಾದ ಕೊರತೆ ರೋಗ ರುಜಿನವೂ ಅಲ್ಲ, ಅದು ಆತ್ಮನಿಂದನೆ, ನಮ್ಮನ್ನು ನಾವು ನಂಬಬೇಕು ಮತ್ತು ಪ್ರಯತ್ನಶೀಲರಾಗಿರಬೇಕು. ಜನರ ಬದುಕನ್ನು ಅರ್ಥೈಸಿಕೊಳ್ಳಲು ಹಾಗೂ ನಮ್ಮ ಜ್ಞಾನವೃದ್ಧಿಗೆ, ಸಮಾಜ ಸೇವೆ ಮಾಡಲು ಕೃಷಿ, ಪಶು ವೈದ್ಯ, ಪಶು ಸಂಗೋಪನೆ ಮತ್ತು ಮೀನುಗಾರಿಕಾ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಕೃಷಿ, ಪಶುವೈದ್ಯ, ಪಶುಸಂಗೋಪನೆ ಮತ್ತು ಮೀನುಗಾರಿಕಾ ವಿಜ್ಞಾನ ಪದವಿ ಕೋರ್ಸುಗಳ ಕುರಿತು ವಿಶೇಷ ಉಪನ್ಯಾಸವನ್ನು ವಿದ್ಯಾರ್ಥಿಗಳಿಗೆ ನೀಡುತ್ತ ಕೃಷಿ, ಪಶು ವೈದ್ಯ, ಪಶು ಸಂಗೋಪನೆ ಮತ್ತು ಮೀನುಗಾರಿಕಾ ಕ್ಷೇತ್ರಗಳಲ್ಲಿ ಶ್ರದ್ಧೆಯಿಂದ ಉನ್ನತ ಶಿಕ್ಷಣವನ್ನು ಪಡೆದು ಸಂಶೋಧನೆಗಳಲ್ಲಿ ತೊಡಗಿಸಿಕೊಂಡರೆ ರಾಷ್ಟ್ರೀಯ ಮಟ್ಟಗಳಲ್ಲಿಯೂ ಪ್ರಸಿದ್ದಿ ಮತ್ತು ಉತ್ತಮ ವೇತನವನ್ನು ಪಡೆಯಬಹುದು.
ಈ ಸಂದರ್ಭದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಕರುಣಾಕರ ಬಳ್ಕೂರು ಇನ್ನಿತರ ಉಪನ್ಯಾಸಕರು ಉಪಸ್ಥಿತರಿದ್ದರು. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯಾದ ಸೃಷ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.