ಸುಳ್ಯ, ಸೆ 07 (Daijiworld News/MSP): ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, ದ್ವೇಷ ರಾಜಕಾರಣದ ಪ್ರತೀಕ ಎಂದು ಸುಳ್ಯ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರು ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿ ಮಾತನಾಡಿದ ಅವರು, ಬಿಜೆಪಿಯವರು ಎಷ್ಟೇ ದೊಡ್ಡ ಆರ್ಥಿಕ ಅಕ್ರಮಗಳನ್ನು ನಡೆಸಿದರೂ, ಅಕ್ರಮ ಆಸ್ತಿ ಸಂಪಾದಿಸಿದರೂ ಅವರ ಮೇಲೆ ಏನೂ ಕ್ರಮ ಕೈಗೊಳ್ಳುವುದಿಲ್ಲ. ಕಾಂಗ್ರಸ್ಸಿನ ಪ್ರಭಾವಿ ಮುಖಂಡ ಎಂಬ ಕಾರಣಕ್ಕೆ ಡಿಕೆಶಿಯನ್ನು ಬಂಧಿಸಲಾಗಿದೆ ಎಂದ ಅವರು, ಸದಾ ಹಿಂದುತ್ವ ಎಂದು ಹೇಳುವ ಬಿಜೆಪಿಯವರು ಡಿಕೆ. ಶಿವಕುಮಾರ್ ಅವರ ತಂದೆಯ ಕಾರ್ಯಕ್ರಮಕ್ಕೂ ಬರಲು ಅವಕಾಶ ನೀಡದಿರುವುದು ಖಂಡನೀಯ ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರವೀಣಾ ರೈ ಮರುವಂಜ, ಶ್ರೀಮತಿ ಶ್ರೀಲತಾ ಪ್ರಸನ್ನ, ಶ್ರೀಮತಿ ತಿರುಮಲೇಶ್ವರಿ ಅಡ್ಕಾರು, ಶ್ರೀಮತಿ ಮೋಹಿನಿ ಪೆಲತ್ತಡ್ಕ ಪತ್ರಿಕಾಗೋಷ್ಠಿಯಲ್ಲಿದ್ದರು.