ಉಡುಪಿ:ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಭೂತಾರಾಧನೆಯ ಬಗ್ಗೆ ಅಪಹಾಸ್ಯ - ಬಹಿರಂಗ ಕ್ಷಮೆ ಯಾಚನೆ
Sat, Sep 07 2019 11:27:40 AM
ಉಡುಪಿ, ಸೆ 07 (Daijiworld News/MSP): ದೈವರಾಧನೆಯ ಈ ಪವಿತ್ರ ಭೂಮಿಯಲ್ಲಿ ದೈವಾರಾಧನೆಯನ್ನೇ ಅಪಮಾನ ಮಾಡುವ ಪ್ರಸಂಗ ನಡೆದಿದೆ. ಈ ಬಗ್ಗೆ ತುಳುನಾಡಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಭೂತಾರಾಧನೆ ಅಣಕಿಸಿದ ವೇಷ ತೊಟ್ಟ ವ್ಯಕ್ತಿಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸುವ ಮೂಲಕ ವಿವಾದ ತಣ್ಣಗಾಗಿಸಲು ಯತ್ನಿಸಿದ್ದಾರೆ.
ಉಡುಪಿ ಮುಂಡ್ಕೂರು ಗಣೇಶ ಮಂಡಲದ ಮೆರಣಿಗೆಯ ಸಮಯದಲೇ ಕೆಲವು ವ್ಯಕ್ತಿಗಳು ದೈವಪಾತ್ರಿಯಂತೆ ವೇಷ ಹಾಕಿಕೊಂಡು ನಡು ರಸ್ತೆಯಲ್ಲಿ ಆವೇಶ ಬಂದಂತೆ ನರ್ತಿಸಿದ್ದರು. ನಡುರಸ್ತೆಯಲ್ಲಿ ಮನರಂಜನೆಯ ನೆಪದಲ್ಲಿ ಭೂತಾರಾಧನೆಯನ್ನು ಅಪಹಾಸ್ಯ ಘಟನೆ ವಿರುದ್ದ ದೈವಾರಾದಕರ ಹಾಗೂ ಹಿಂದೂ ಸಂಘಟನೆಗಳು ಸಿಡಿದೆದ್ದು ಕ್ಷಮೆಯಾಚಿಸುವಂತೆ ತಿಳಿಸಿತ್ತು. ಮಾತ್ರವಲ್ಲದೆ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿತ್ತು. ಹಿಂದೂ ಧರ್ಮವನ್ನು ಅಣಕವಾಡು ಅನ್ಯಮತೀಯರನ್ನು ದೂರಿ ಪ್ರಯೋಜನವೇನು ? ಹಿಂದೂ ಸಮೂದಾಯದಿಂದಲೇ ದೈವ-ದೇವರಿಗೆ ಅವಮಾನಿಸುವ ಕೆಲಸ ನಡೆದಿದೆ ಎಂಬ ಮಾತುಗಳು ಕೇಳಿಬಂದಿತ್ತು.
ಈ ಘಟನೆಯ ಬಳಿಕ ದೈವಪಾತ್ರಿಯಂತೆ ವೇಷ ಹಾಕಿರುವ ವ್ಯಕ್ತಿ ತಿಳಿಯದೆ ಮಾಡಿರುವ ತಪ್ಪಿನ ಅರಿವಾಗಿದೆ ಎಂದು ಕ್ಷಮೆಯಾಚಿಸುವ ಮೂಲಕ ಮೂಲಕ ವಿವಾದ ತಣ್ಣಗಾಗಿಸಲು ಯತ್ನಿಸಿದ್ದಾರೆ.