ಬೆಳ್ತಂಗಡಿ, ಸೆ 6 (DaijiworldNews/SM): ಕಳೆದ ಆಗಸ್ಟ್ ೯ರಂದು ಪ್ರಕೃತಿ ವಿಕೋಪದಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಬಾಂಜಾರುಮಲೆ ಸಂಪರ್ಕಿಸುವ ನದಿಗೆ ಶಾಶ್ವತವಾಗಿ ೩೦ ಟನ್ ಸಾಮರ್ಥ್ಯದ ಸ್ಟೀಲ್ ಬ್ರಿಡ್ಜ್ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿನ ಜನರಿಗೆ ಆಗಮನಕ್ಕೆ ಸಿದ್ಧವಾಗಿದೆ. ಪ್ರಸ್ತುತ ನಿರ್ಮಾಣವಾದ ಸೇತುವೆಯಲ್ಲಿ ಎಲ್ಲಾ ತರಹದ ವಾಹನಗಳು ಸಂಚರಿಸಬಹುದಾಗಿದೆ.
೧೯೫೩-೫೪ರಲ್ಲಿ ಬಾಂಜಾರು ಮಲೆಯಲ್ಲಿ ಅಣಿಯೂರು ಹೊಳೆಗೆ ಸೇತುವೆ ನಿರ್ಮಿಸಲಾಗಿದ್ದ ಸೇತುವೆ ಆಗಸ್ಟ್ ೯ರಂದು ಇಲ್ಲಿನ ಸಂಪರ್ಕದ ಸೇತುವೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಸಂಪರ್ಕವೇ ಕಡಿತಗೊಂಡಿತ್ತು. ಇದೀಗ ಕಳೆದೊಂದು ವಾರದಿಂದ ಯೇನೆಪೋಯ ಸಂಸ್ಥೆ ಕಟ್ಟಲು ಮುಂದಾಗಿದ್ದ ೩೦ ಟನ್ ಸಾಮರ್ಥ್ಯದ ಉಕ್ಕಿನ ಸೇತುವೆ ಪೂರ್ಣಗೊಂಡಿದೆ. ೧೫ ದಿನದೊಳಗೆ ಇಲ್ಲಿಗೆ ಶಾಶ್ವತ ಸೇತುವೆ ನಿರ್ಮಾಣವಾಗಿದ್ದು, ಇಲ್ಲಿನ ನಿವಾಸಿಗಳು ಈಗ ನಿರಾಳರಾಗಿದ್ದಾರೆ.
ಪ್ರವಾಹದ ಸೆಳೆತಕ್ಕೆ ಕೊಚ್ಚಿಹೋಗಿದ್ದ ಸೇತುವೆಯಿಂದ ಬಾಂಜಾರುಮಲೆಯ ಜನರು ಸಂಪರ್ಕವಿಲ್ಲದೆ ಸಮಸ್ಯೆಯನ್ನು ಎದುರಿಸಿದ್ದರು. ಸೇತುವೆಯ ಮರುಸ್ಥಾಪನೆಗೆ ಶಾಸಕರು ಹಾಗೂ ಜಿಲ್ಲಾಡಳಿತದ ಸಹಕಾರದಿಂದ ವಾಕಿಂಗ್ ಸ್ಟೀಲ್ ಬ್ರಿಡ್ಜ್ ನಿರ್ಮಿಸಿದ್ದರು. ಆದರೆ ಎಲ್ಲಾ ವಿಧದಲ್ಲೂ ತುರ್ತು ಸೇವೆಗಾಗಿ ವಾಹನ ಓಡಾಟಕ್ಕೆ ಮಾತ್ರ ಕಷ್ಟಕರವಾಗಿತ್ತು. ಸ್ಥಳೀಯ ಬೇಡಿಕೆಯಂತೆ ಶಾಸಕ ಹರೀಶ್ ಪೂಂಜ ಅವರ ಮನವಿಗೆ ಸ್ಪಂದಿಸಿದ ಯೇನಪೋಯ ಸಂಸ್ಥೆ ೩೦ ಟನ್ ಸಾಮರ್ಥದ ವಾಹನ ಸಾಗಾಟಕ್ಕೆ ಸ್ಟೀಲ್ ಬ್ರಿಡ್ಜ್ ನಿರ್ಮಿಸಿದೆ. ೪.೫ಮೀಟರ್ ಅಗಲ, ೧೨ಮೀಟರ್ ಉದ್ದದ ಉಕ್ಕಿನ ಸೇತುವೆಯಾಗಿದ್ದು, ೩೦ಟನ್ ಭಾರದ ವಾಹನಗಳು ಇದರ ಮೇಲೆ ಸಂಚರಿಸಬಹುದಾಗಿದೆ.