ಕಾಸರಗೋಡು, ಡಿ 27: ಅಬಕಾರಿ ದಳದ ಸಿಬ್ಬಂದಿಗಳು ಕಳೆದ ಎರಡು ಮೂರು ದಿನಗಳ ಅವಧಿಯಲ್ಲಿ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾಚರಣೆಯಿಂದ ಅಪಾರ ಪ್ರಮಾಣದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಹೊಸಂಗಡಿ ಅಂಗಡಿಪದವು ಎಂಬಲ್ಲಿ ಕೋಣೆ ಯೊಂದರಲ್ಲಿ ದಾಸ್ತಾನಿಡಲಾಗಿದ್ದ 192 ಲೀಟರ್ ಮದ್ಯ , 24 ಬಾಟ್ಲಿ ಬಿಯರ್ ನ್ನು ವಶಪಡಿಸಿಕೊಂಡಿದ್ದಾರೆ.ಇಲ್ಲಿ ದಾಸ್ತಾನಿಟ್ಟು ರಾತ್ರಿ ಸಮಯದಲ್ಲಿ ಇತರ ಸ್ಥಳಗಳಿಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ .ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಿಲ್ ಮತ್ತು ದಿನೇಶ್ ಎಂಬ ಸಹೋದರರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.ಕಯ್ಯಾರ್ ನಲ್ಲಿ ಪೊದೆಗಳಲ್ಲಿ ಬಚ್ಚಿಡಲಾಗಿದ್ದ 13 ಲೀಟರ್ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.ಕಯ್ಯಾರು ಗ್ರಾಮ ಕಚೇರಿ ಸಮೀಪದ ಪೊದೆಯೊಂದರಲ್ಲಿ ಮದ್ಯವನ್ನು ಬಚ್ಚಿಡಲಾಗಿತ್ತು.
ಹಲವು ಸಮಯಗಳಿಂದ ಇಲ್ಲಿ ಮದ್ಯ ಮಾರಾಟವಾಗುತ್ತಿದೆ ಎಂಬ ಮಾಹಿತಿ ಅಬಕಾರಿ ದಳಕ್ಕೆ ಲಭಿಸಿದೆ.ಕ್ರಿಸ್ಮಸ್ ಮತ್ತು ಹೊಸ ವರ್ಷದ ಹಿನ್ನಲೆಯಲ್ಲಿ ಬಾರಿ ಪ್ರಮಾಣದ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಅಬಕಾರಿ ದಳ ಹಲವೆಡೆ ಕಾರ್ಯಾಚರಣೆ ನಡೆಸುತ್ತಿದೆ.