ವಿಟ್ಲ, ಸೆ 05 (DaijiworldNews/SM): ತೋಟದಲ್ಲಿ ಕೆಲಸ ಮಾಡುವ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಮಹಿಳೆ ಮೃತ ಪಟ್ಟ ಘಟನೆ ಕನ್ಯಾನ ಸಮೀಪದ ಅಂಗ್ರಿಯಲ್ಲಿ ಗುರುವಾರ ನಡೆದಿದೆ.
ಕನ್ಯಾನ ಅಂಗ್ರಿ ನಿವಾಸಿ ಅನಿತಾ ಡಿಸೋಜ (36) ಅವರು ಮೃತ ದುರ್ದೈವಿ. ಮನೆ ಪಕ್ಕದ ತೋಟಕ್ಕೆ ಕೆಲಸಕ್ಕೆ ತೆರಳಿದ್ದರು. ಕೆಲಸಕ್ಕೆ ಹೋಗಿದ್ದ ಇವರು 11ಗಂಟೆಗೆ ಕಾಫಿ ಕುಡಿಯಲು ಬಾರದ ಹಿನ್ನಲೆಯಲ್ಲಿ ತೋಟದ ಮಾಲಕರು ಹುಡುಕಲು ಹೋಗುವಾಗ ಕೆರೆಯಲ್ಲಿ ಚಪ್ಪಲ್ ಸೇರಿ ಇನ್ನಿತರ ಸಾಮಾಗ್ರಿ ತೇಲುತ್ತಿದ್ದುದನ್ನು ಗಮನಿಸಿ, ಸ್ಥಳೀಯರೊಂದಿಗೆ ಹುಡುಕಾಡಿದಾಗ ದೇಹ ಪತ್ತೆಯಾಗಿದೆ.
ವಿಟ್ಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣದಾಖಲಾಗಿದ್ದು, ಕಾಲು ಜಾರಿ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ.