ಮಂಗಳೂರು, ಸೆ 05 (DaijiworldNews/SM): ನಗರದ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಎಂಟು ಜನ ಆರೋಪಿಗಳನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಲಾಗಿದೆ.
ಆರೋಪಿಗಳಿಂದ ಸುಮಾರು 49,340 ನಗದು, ಬೊಲೆನ ಕಾರು-1, ದ್ವಿ ಚಕ್ರ ವಾಹನ-3 ಹಾಗೂ 10 ಮೊಬೈಲ್ ಪೋನ್ ಹಾಗೂ ಜುಗಾರಿ ಆಟ ಆಡಲು ಉಪಯೋಗಿಸಿದ ವಸ್ತುಗಳನ್ನು ವಶ ಪಡಿಸಿಕೊಂಡಿರುತ್ತಾರೆ. ಪ್ರವೀಣ್ (41), ನವೀನ್(35), ನವೀನ್ ಆಳ್ವ(39), ಬಶೀರ್(52), ಸತೀಶ(33), ವಿಜಯ ಕುಮಾರ್(38), ಭಾಸ್ಕರ(45) ಆಕಾಶ್(31) ಬಂಧಿತ ಆರೋಪಿಗಳಾಗಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.