ಸುಳ್ಯ, ಸೆ 04 (DaijiworldNews/SM): ಕಳೆದ ವರ್ಷದ ಮಳೆಗಾಲದಲ್ಲಿ ಗುಡ್ಡ ಕುಸಿತದಿಂದಾಗಿ ಅಕ್ಷರಶಃ ನಲುಗ್ಗಿದ್ದ ಜೋಡುಪಾಲದಲ್ಲಿ ಇದೀಗ ಮತ್ತೆ ಗುಡ್ಡ ಕುಸಿದಿದೆ. ಜೋಡುಪಾಲ ಸಮೀಪ ಮಾಣಿ - ಮೈಸೂರು ರಸ್ತೆಗೆ ಗುಡ್ಡ ಕುಸಿದು ಸಂಚಾರಕ್ಕೆ ತಡೆ ಉಂಟಾಯಿತು.
ಕೆಲವು ತಾಸು ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ತಕ್ಷಣ ಕೊಡಗು ಜಿಲ್ಲಾಡಳಿತಕ್ಕೆ ಸುದ್ದಿ ರವಾನಿಸಲಾಗಿದೆ. ಸುದ್ದಿ ತಿಳಿದಾಕ್ಷಣ ಸ್ಪಂಧಿಸಿದ ಜಿಲ್ಲಾಡಳಿತ ಮಣ್ಣು ತೆರವು ಕಾರ್ಯಾಚರಣೆ ನಡೆಸಿದೆ. ಜೆಸಿಬಿ ಬಳಸಿಕೊಂಡು ಮಣ್ಣು ತೆರವು ಕಾರ್ಯ ನಡೆಸಿದೆ. ಅಲ್ಲದೆ, ರಸ್ತೆಗೆ ಬಿದ್ದಿದ್ದ ಮರವನ್ನು ತೆರವುಗೊಳಿಸಲಾಗಿದೆ. ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಂಡಲಾಗಿದೆ.