ಉಡುಪಿ, ಸೆ 05 (Daijiworld News/RD): ಇದೇ ತಿಂಗಳು 18 ರೊಳಗಾಗಿ ಸಿಆರ್ ಝೆಡ್ ಅಡಿಯಲ್ಲಿ ಮರಳಗಾರಿಕೆ ಆರಂಭವಾಗಬಹುದು, ಇದಕ್ಕಾಗಿ ಆದೇಶ ಹೊರಡಿಸುವ ಮೊದಲು, ಇದಕ್ಕಾಗಿ ಜಿಲ್ಲಾಧಿಕಾರಿ ಏಳು ಮಂದಿ ಕಮಿಟಿ ಸಭೆ ನಡೆಸಲಿದ್ದಾರೆ. ಸೆಪ್ಟೆಂಬರ್ 20 ರೊಳಗೆ ಮರಳು ಗ್ರಾಹಕರಿಕೆ ಹಿಂದಿನ ಪದ್ದತಿಯಲ್ಲಿ ಲಭಿಸುವಂತೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಯವರು ಆಶ್ವಾಸನೆ ನೀಡಿದ್ದಾರೆ ಎಂದು ಉಡುಪಿಯ ಶಾಸಕ ರಘುಪತಿ ಭಟ್ ಹೇಳಿದರು.
ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಂಡ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿ ಮಟ್ಟದ ಚರ್ಚೆಯಾಗಿದೆ. ಸ್ಯಾಂಡ್ ಆಪ್ ಬಜಾರ್ ಪೂರ್ಣವಾಗಲು ಮೂರು ತಿಂಗಳ ಸಮಯಾವಕಶವನ್ನು ಕೇಳಲಾಗಿದೆ. ಅಕ್ಟೋಬರ್ 15ರಿಂದ ಮರಳುಗಾರಿಕೆ ನಾನ್-ಸಿಆರ್ ಜಡ್ ಅಡಿಯಲ್ಲಿ ಪ್ರಾರಂಬ ಮಾಡಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬಹುದು. ಎರಡು ಟೆಂಡರ್ ಅರ್ಹತೆ ಪಡೆದಿದ್ದು, ಇನ್ನು ಒಂಭತ್ತು ಕಡೆಗಳಲ್ಲಿ ಷರತ್ತುಗಳಿದ್ದು, ಅದನ್ನು ಇನ್ನಷ್ಟು ಸರಳೀಕರಣಗೊಳಿಸಲು ಸಲಹೆ ನೀಡಲಾಗಿದೆ ಎಂದರು.
ಕಳೆದ ಸರಕಾರ ಕೆಸಿಜಡ್ ಮೂಲಕ ಜೂನ್ ಸೆಪ್ಟೆಂಬರ್ ಫಿಶ್ ಬಿಡಿಂಗ್ ಸೀಸನ್ ಎಂಬ ಕಾರಣಕ್ಕೆ ಮರಳುಗಾರಿಕೆ ನಿಷೇಧವಾಗಿತ್ತು. ಆದರೆ ಕಾನೂನಿನ ಪ್ರಕಾರ ಜೂನ್ -ಜುಲೈ ನಲ್ಲಿ ಮಾತ್ರ ನಿಷೇಧ ಇದೆ. ಒಟ್ಟು ಎಫ್ ಐ ಆರ್ ಆದವರನ್ನು ಹೊರತು ಪಡಿಸಿ ಉಳಿದ 150 ಮಂದಿಗೂ ಅನುಮತಿ ದೊರೆಯುವ ನಿರೀಕ್ಷೆ ಇದೆ. ಈಗ ಜಿಲ್ಲೆಯಲ್ಲಿ ಕಳೆದ ಬಾರಿಉ ಮರಳು ದಿಬ್ಬ ತೆರವು ಕಾರ್ಯ ಆಗದೇ ಇದ್ದುದರಿಂದ, ಸಾಕಷ್ಟು ಮರಳು ಸಂಗ್ರಹವಾಘಿದ್ದು ಸುಮಾರು 8,70,000 ಮೆಟ್ರಿಕ್ ಟನ್ ಗರಿಷ್ಠ ಮರಳು ಸಿಗುವ ಅವಕಾಶವಿದೆ. ಕಡಿಮೆ ಬೆಲೆಗೆ ಮರಳು ಸಿಗಬೇಕು ಎಂಬುದು ನಮ್ಮ ಉದ್ದೇಶ. ನಮ್ಮ ಜಿಲ್ಲೆಯಲ್ಲಿ ಸಿಗುವ ಮರಳು ಜಿಲ್ಲೆಗೆ ಮಾತ್ರ ಸಿಗಬೇಕು, ಜಿಲ್ಲೆಯಿಂದ ಹೊರಗೆ ಸಾಗಾಟ ಆಗಬಾರದು ಎನ್ನುವ ಮನವಿ ಕೂಡ ಮಾಡಲಾಗಿದೆ. ಮರಳು ಅನುಮತಿ ಕೊಡಲು ರಚಿಸಿದ ಏಳು ಮಂದಿ ಸಮಿತಿಯ ಬಗ್ಗೆ ಶಾಸರೊಂದಿಗೆ ಚರ್ಚೆಯಾಗಿಲ್ಲ, ಎಂದು ರಘುಪತಿ ಭಟ್ ತಿಳಿಸಿದರು.
ಎನ್ಜಿಟಿ ಎಂದರೆ ಹೆದರಿಸಲು ಉಪಯೋಗಿಸುವ ವಸ್ತು ಆಗಿದೆ. ನಿಯಮ ಬದ್ದವಾಗಿ ಕೆಲಸ ಮಾಡಿದರೆ ಯಾರಿಗೂ ಹೆದರಬೇಕಾಗಿಲ್ಲ. ಈ ಹಿಂದೆ ಕೋರ್ಟ ಗೆ ಹೋದವರು ಮುಂದೆಯೂ ಹೋಗಬಹುದು. ಮುಂದೆ ಪ್ರಮೋದ್ ಮಧ್ವರಾಜ್ ಬಿಜೆಪಿ ಸದಸ್ಯತ್ವಕ್ಕೆ ಅರ್ಜಿ ಹಾಕಿದರೆ, ಪರಿಗಣಿಸುವ ಸಾದ್ಯತೆ ಇದೆ ಎಂದು ಭಟ್ ಲೇವಡಿ ಮಾಡಿದರು.
ಬಿಜೆಪಿಗೂ ರಾಜಕೀಯ ನಾಯಕರ ಬಂಧನಕ್ಕೂ ಯಾವುದೇ ಸಂಬಂದವಿಲ್ಲ. ಅಂತಹ ರಾಜಕಾರಣಿ ಚಿದಂಬರಂ ಅವರ ಮೇಲೂ ಐಟಿ ರೈಡ್ ಆಗಿದೆ. ಕಾಂಗ್ರೆಸ್ ನಾಯಕರು ಸುಳ್ಳು ಸುದ್ದಿ ಹಬ್ಬಿಸಿ, ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಹೇಳಿದರು. ನೂತನ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಜಿಲ್ಲಾ ಬಿಜೆಪಿ ವತಿಯಿಂದ ಸೆ. 14 ಅಥವಾ 15 ನಂತರ ಅಭಿನಂದನಾ ಕಾರ್ಯಕ್ರಮ ಕೈಗೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಮಟ್ಟಾರ್ ರತ್ನಾಕರ್ ಹೆಗ್ಡೆ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಭಾಕರ್ ಪೂಜಾರಿ, ಅಧ್ಯಕ್ಷರು, ನಗರ ಬಿಜೆಪಿ, ಪ್ರದೀಪ್ ರಾವ್ ಗಿರಿಧರ್ ಆಚಾರ್ಯ ಉಪಸ್ಥಿತರಿದ್ದರು.