ಕಲಬುರ್ಗಿ ಡಿ 26: ಹಲವಾರು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಕೇಂದ್ರ ಸಚಿವ ಅನಂತ್ಕುಮಾರ ಹೆಗಡೆಯ ನಾಲಿಗೆ ಕತ್ತರಿಸಿ ತಂದವರಿಗೆ ಒಂದು ಕೋಟಿ ರೂ. ಬಹುಮಾನ ಕೊಡುತ್ತೇವೆ ಎಂದು ನಗರದಲ್ಲಿಂದು ಜಿಪಂ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವರು ಜಾತ್ಯತೀತ ಪದಕ್ಕೆ ಚ್ಯುತಿ ತರುವ ಹೇಳಿಕೆ ನೀಡಿದ್ದಾರೆ. ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕಿತ್ತು ಹಾಕಬೇಕು' ಎಂದು ಆಗ್ರಹಿಸಿದರು.ದೇಶದಲ್ಲಿ ಎಲ್ಲರೂ ಶಾಂತಿಯಿಂದ ಬದುಕುತ್ತಿದ್ದಾರೆ. ಆದರೆ ಹೆಗಡೆ ಸಮಾಜದಲ್ಲಿ ಅಶಾಂತಿ ಹುಟ್ಟುಹಾಕುವ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಸಂವಿಧಾನ ವಿರೋಧಿ ನಡೆಯನ್ನು ಬಿಜೆಪಿಯವರು ಬಿಡಬೇಕು ಎಂದು ಕಿಡಿಕಾರಿದರು.
ಸಂವಿಧಾನ ಹಾಗೂ ದೇಶದ್ರೋಹದ ಹೇಳಿಕೆ ಯಾರೇ ನೀಡಲಿ ಅಂಥವರ ಮೊದಲು ನಾಲಿಗೆ, ಆನಂತರ ಕೈ-ಕಾಲು, ಕುತ್ತಿಗೆ ಕಡಿಯುತ್ತೇವೆ ಎಂದು ಎಚ್ಚರಿಸಿದರು. ಜ. 26ರ ಒಳಗೆ ಅನಂತ್ಕುಮಾರ ಹೆಗಡೆ ನಾಲಿಗೆ ಕಟ್ ಮಾಡಿದವರಿಗೆ ಒಂದು ಕೋಟಿ ರೂ. ಇನಾಮು ನೀಡುವುದಾಗಿ ಇದೇ ವೇಳೆ ತಿಳಿಸಿದರು.