ಮೂಡುಬಿದಿರೆ,ಸೆ 04 (Daijiworld News/RD): ದರೆಗುಡ್ಡೆ ಗ್ರಾ.ಪಂ ಸದಸ್ಯೆ, ಬಿಜೆಪಿ ಕಾರ್ಯಕರ್ತೆ ಸುನಂದಾ ಮಂಗಳವಾರ ತಡರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದರೆಗುಡ್ಡೆ ನಿವಾಸಿ ಕಾಂತಪ್ಪ ಪೂಜಾರಿ ಅವರ ಪತ್ನಿ ಸುನಂದಾ. ಮಂಗಳವಾರ ರಾತ್ರಿ ಮನೆಯ ಸದಸ್ಯರೆಲ್ಲರು ಮೂಡುಬಿದಿರೆ ಸಿನಿಮಾ ನೋಡಲು ಬಂದಿದ್ದು, ಸುನಂದ ಅವರು ತಾನು ಬರುವುದಿಲ್ಲ ಎಂದು ಹೇಳಿದ್ದರು. ರಾತ್ರಿ ಮನೆಯ ಸದಸ್ಯರು ಸಿನಿಮಾ ನೋಡಿ ಬಂದಾಗ ಸುನಂದಾ ಅವರು ಕಾಣಿಸಲಿಲ್ಲ. ಹುಡುಕುವಾಗ ಮನೆಯ ಪಕ್ಕದಲ್ಲಿರುವ ಬಾವಿಯಲ್ಲಿ ಶವ ಪತ್ತೆಯಾಗಿದೆ. ಸುನಂದಾ ಅವರಿಗೆ ನಾಲ್ವರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ಆರು ಮಂದಿ ಮಕ್ಕಳಿಗೆ ಮದುವೆಯಾಗಿದೆ.
ಕುಟುಂಬದ ಸದಸ್ಯರೆಲ್ಲ ಅನೋನ್ಯವಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.