ಮಂಗಳೂರು,ಸೆ 2 (Daijiworld News/RD): ನವ ಮಂಗಳೂರು ಬಂದರು ಸಮೀಪದ ಸಮುದ್ರದಲ್ಲಿ ಸಿಲುಕಿಕೊಂಡಿದ್ದ ತ್ರಿದೇವಿ ಪ್ರೇಮ್ ಡ್ರೆಡ್ಜ್ ನಲ್ಲಿದ್ದ 13 ಸಿಬ್ಬಂದಿಗಳನ್ನು ರಕ್ಷಿಸುವಲ್ಲಿ ಭಾರತೀಯ ಕರಾವಳಿ ಪಡೆಯು ಯಶಸ್ವಿಯಾಯಿತು.
ಮುಂಬಯಿ ಮೂಲದ ಮೆರ್ಕೇಟರ್ ಲಿಮಿಟೆಡ್ ಎಂಬ ಕಂಪೆನಿಗೆ ಸೇರಿದ್ದ ಡ್ರೆಡ್ಜ್ ನವ ಮಂಗಳೂರು ಬಂದರಿನ ಆಳ ಪರೀಕ್ಷೆಯ ಸಲುವಾಗಿ ಕಳೆದ ಕೆಲ ದಿನಗಳಿಂದ ಸಮುದ್ರದಲ್ಲಿ ಲಂಗರು ಹಾಕಿದ್ದು, ಡ್ರೆಡ್ಜ್ ನ ಪಂಪ್ ರೂಮಿನ ಬಿರುಕಿನಿಂದ ಸಮುದ್ರದ ನೀರು ಒಳನುಗಿದ್ದು, ಇದರಿಂದ ಡ್ರೆಡ್ಜ್ ಮುಳುಗಡೆಯಾಗುವ ಸ್ಥಿತಿ ನಿರ್ಮಾಣವಾಗಿದ್ದು, ಈ ಮಾಹಿತಿಯನ್ನು ಪಡೆದ ಕರಾವಳಿ ಪಡೆ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.
ಆದಿತ್ಯವಾರವು ಡ್ರೆಡ್ಜಿನ ಪಂಪ್ ರೂಮಿಗೆ ನೀರು ನುಗ್ಗಿತ್ತು ಆದರೆ ಅದನ್ನು ತ್ವರಿತವಾಗಿ ಸರಿಪಡಿಸಲಾಗಿತ್ತು, ಆದರೆ ಸೋಮವಾರ ಬೆಳಿಗ್ಗೆ ಪುನ: ನೀರು ನುಗ್ಗಿದ ಕಾರಣ ಡ್ರೆಡ್ಜ್ ಮುಳುಗುವ ಹಂತ ತಲುಪಿತ್ತು, ಇದರಿಂದ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಯಿತು.