ಬಂಟ್ವಾಳ, ಸೆ 01(DaijiworldNews/SM): ರವಿವಾರ ಮಧ್ಯಾಹ್ನ ಅನಿರೀಕ್ಷಿತವಾಗಿ ಸಿಡಿಲು ಬಡಿದು ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಭಂಡಾರಿಬೆಟ್ಟು ಪರಿಸರದ ಹಲವಾರು ಮನೆಗಳಿಗೆ ಹಾನಿಯಾದ ಘಟನೆ ಸಂಭವಿಸಿದೆ.
ಭಂಡಾರಿಬೆಟ್ಟುವಿನ ಲಾರೆನ್ಸ್ ರಾಡ್ರಿಗಸ್ ಎಂಬವರ ಮನೆಯ ಹಿಂಬದಿಯ ತೆಂಗಿನ ಮರ ಹಾಗೂ ಬಾಳೆಗಿಡಗಳಿಗೆ ಸಿಡಿಲು ಬಡಿದಿದೆ. ಇನ್ನು ಘಟನೆಯ ತೀವ್ರತೆ ಗೆ ಲಾರೆನ್ಸ್ ಅವರ ಮನೆಯ ವಿದ್ಯುತ್ ಸಂಪರ್ಕ ಸಂಪೂರ್ಣ ಸುಟ್ಟು ಹೋಗಿದೆ. ಮೀಟರ್, ಸ್ವಿಚ್ ಬೋರ್ಡ್ ಗಳು, ಬಲ್ಬ್ ಗಳು ಸಿಡಿಲು ಹೊಡೆದ ರಭಸಕ್ಕೆ ಹೊರೆಗೆ ಎಸೆಯಲ್ಪಟ್ಟಿದೆ, ಟಿವಿ, ಪ್ರಿಡ್ಜ್ ಸಹಿತ ಅನೇಕ ವಿದ್ಯುತ್ ಉಪಕರಣಗಳು ಕೆಟ್ಟುಹೊಗಿದೆ.
ಇದೇ ಪರಿಸರದ ಪ್ರೆಸಿಲ್ಲಾ ಡಿಸೋಜ ಟೀಚರ್, ಮೆಸ್ಕಾಂ ಸಿಬ್ಬಂದಿ ಯಲ್ಲಪ್ಪ, ರೇಖಾ ಮತ್ತು ಅಲೋಶಿಯಸ್ ಅವರ ಮನೆಯ ವಿದ್ಯುತ್ ಸಂಪರ್ಕ ಗಳಿಗೂ ಹಾನಿಯಾಗಿದೆ. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಂಡಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ಸಿಬ್ಬಂದಿ ಸದಾಶಿವ ಕೈಕಂಬ, ಬೇಟಿ ನೀಡಿ ಪರಿಶೀಲನೆ ನಡೆಸಿ ಮಹಜರು ಮಾಡಿದ್ದಾರೆ.