ಉಡುಪಿ, ಆ 31 (Daijiworld News/MSP): ಸೆಪ್ಟಂಬರ್ 2 ರಂದು ಗಣೇಶ ಚತುರ್ಥಿ ಹಬ್ಬ ಆಚರಣೆ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅದ್ಧೂರಿ ಮೆರವಣಿಗೆಗಳು ನಡೆಯಲಿರುವುದರಿಂದ ಈ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಜಗದೀಶ್ ಈ ಕೆಳಕಂಡ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ, ಆದೇಶ ಹೊರಡಿಸಿರುತ್ತಾರೆ.
ಉಡುಪಿ ನಗರ ಠಾಣಾ ವ್ಯಾಪ್ತಿಯ ಗ್ರಾಮವಾದ ಕೊರಂಗ್ರಪಾಡಿ(4 ಕಿ.ಮೀ.ವ್ಯಾಪ್ತಿ)ಯಲ್ಲಿ ಸೆಪ್ಟಂಬರ್ 2 ರಂದು ಬೆಳಗ್ಗೆ 6 ರಿಂದ ಸೆಪ್ಟಂಬರ್ 3 ರ ಬೆಳಗ್ಗೆ 6 ಗಂಟೆಯವರೆಗೆ.
ಮಲ್ಪೆ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಕೊಡವೂರು, ಕಿದಿಯೂರು, ಕಡೆಕಾರು, ಮೂಡುತೊನ್ಸೆ, ಪಡುತೊನ್ಸೆ, ತೆಂಕನಿಡಿಯೂರು, ಕೆಳಾರ್ಕಳಬೆಟ್ಟು, ಬಡಾ ನಿಡಿಯೂರಿ(1 ಕಿ.ಮೀ. ವ್ಯಾಪ್ತಿ)ನಲ್ಲಿ ಸೆಪ್ಟಂಬರ್ 2 ರಂದು ಬೆಳಗ್ಗೆ 6 ರಿಂದ ಸೆಪ್ಟಂಬರ್ 3 ರ ಬೆಳಗ್ಗೆ 6 ಗಂಟೆಯವರೆಗೆ.
ಕೋಟ ಠಾಣಾ ವ್ಯಾಪ್ತಿಯ ಗ್ರಾಮವಾದ ತೆಕ್ಕಟ್ಟೆ (1 ಕಿ.ಮೀ. ವ್ಯಾಪ್ತಿ)ಯಲ್ಲಿ ಸೆಪ್ಟಂಬರ್ 2 ರಂದು ಬೆಳಗ್ಗೆ 16 ಗಂಟೆಯಿಂದ 23 ಗಂಟೆಯವರೆಗೆ.
ಕೋಟ ಠಾಣಾ ವ್ಯಾಪ್ತಿಯ ಗ್ರಾಮವಾದ ಹಾರ್ದಳ್ಳಿ ಮಂಡಳ್ಳಿ (500 ಮೀ. ವ್ಯಾಪ್ತಿ) ಯಲ್ಲಿ ಸೆಪ್ಟಂಬರ್ 2 ರಂದು 15.30 ರಿಂದ 23 ಗಂಟೆಯವರೆಗೆ.
ಕೋಟ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಹಳ್ಳಾಡಿ-ಹರ್ಕಾಡಿ, ಗುಂಡ್ಮಿ ಗ್ರಾಮ, ಬನ್ನಾಡಿ, ಹಂಗಾರಕಟ್ಟೆ, ಬೇಳೂರು, ಶಿರಿಯಾರಗಳಲ್ಲಿ ಸೆಪ್ಟಂಬರ್ 3 ರಂದು 15 ಗಂಟೆಯಿಂದ 23 ಗಂಟೆಯವರೆಗೆ.
ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗ್ರಾಮವಾದ ಕರ್ಕುಂಜೆ (ನೇರಳಕಟ್ಟೆ ಪೇಟೆ 3 ಕಿ.ಮೀ. ವ್ಯಾಪ್ತಿ) ಯಲ್ಲಿ ಸೆಪ್ಟಂಬರ್ 3 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 11.30 ರ ವರೆಗೆ.
ಮಲ್ಪೆ ಠಾಣಾ ವ್ಯಾಪ್ತಿಯ ಗ್ರಾಮವಾದ ಪಡುತೊನ್ಸೆ (1 ಕಿ.ಮೀ. ವ್ಯಾಪ್ತಿ)ಯಲ್ಲಿ ಸೆಪ್ಟಂಬರ್ 4 ರಂದು ಬೆಳಗ್ಗೆ 6 ಗಂಟೆಯಿಂದ ಸೆಪ್ಟಂಬರ್ 5 ರ ಬೆಳಗ್ಗೆ 6 ಗಂಟೆಯವರೆಗೆ.
ಉಡುಪಿ ನಗರ ಠಾಣಾ ವ್ಯಾಪ್ತಿಯ ಗ್ರಾಮವಾದ ಮೂಡು ನಿಡಂಬೂರಿನಲ್ಲಿ (5 ಕಿ.ಮೀ. ವ್ಯಾಪ್ತಿ) ಸೆಪ್ಟಂಬರ್ 4 ರಂದು ಬೆಳಗ್ಗೆ 11 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ.
ಕೋಟ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಚಿತ್ರಪಾಡಿ, ಹೊಂಬಾಡಿ ಮುಂಡಾಡಿ, ಶಿರಿಯಾರ, ಗಿಳಿಯಾರು, ತೆಕ್ಕಟ್ಟೆಯಲ್ಲಿ ಸೆಪ್ಟಂಬರ್ 4 ರಂದು 15 ಗಂಟೆಯಿಂದ 23 ಗಂಟೆಯವರೆಗೆ.
ಹಿರಿಯಡ್ಕ ಠಾಣಾ ವ್ಯಾಪ್ತಿಯ ಗ್ರಾಮವಾದ ಬೊಮ್ಮರಬೆಟ್ಟುವಿನಲ್ಲಿ (3 ಕಿ.ಮೀ ವ್ಯಾಪ್ತಿ) ಸೆಪ್ಟಂಬರ್ 4 ರಂದು ಬೆಳಗ್ಗೆ 6 ಗಂಟೆಯಿಂದ ಸೆಪ್ಟಂಬರ್ 5 ರ ಬೆಳಗ್ಗೆ 6 ರ ವರೆಗೆ.
ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗ್ರಾಮವಾದ ಕಾವ್ರಾಡಿ (ಕಂಡ್ಲೂರು ಪೇಟೆ 2 ಕಿ.ಮೀ. ವ್ಯಾಪ್ತಿ)ಯಲ್ಲಿ ಸೆಪ್ಟಂಬರ್ 4 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 23.30 ಗಂಟೆಯವರೆಗೆ.
ಅಮಾಸೆಬೈಲು ಠಾಣಾ ವ್ಯಾಪ್ತಿಯ ಗ್ರಾಮವಾದ ಹೊಸಂಗಡಿಯಲ್ಲಿ ಸೆಪ್ಟಂಬರ್ 4 ರಂದು 12 ಗಂಟೆಯಿಂದ ಸೆಪ್ಟಂಬರ್ 5 ರ ಬೆಳಗ್ಗೆ 6 ಗಂಟೆಯವರೆಗೆ.
ಶಂಕರನಾರಾಯಣ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಸಿದ್ದಾಪುರ (3 ಕಿ.ಮೀ. ವ್ಯಾಪ್ತಿ), ಅಂಪಾರಿನಲ್ಲಿ (2 ಕಿ.ಮೀ. ವ್ಯಾಪ್ತಿ) ಸೆಪ್ಟಂಬರ್ 4 ರಂದು 12 ಗಂಟೆಯಿಂದ ಸೆಪ್ಟಂಬರ್ 5 ರ ಬೆಳಗ್ಗೆ 6 ಗಂಟೆಯವರೆಗೆ.
ಶಂಕರನಾರಾಯಣ ಠಾಣಾ ವ್ಯಾಪ್ತಿಯ ಗ್ರಾಮವಾದ ಬೆಳ್ವೆ (3 ಕಿ.ಮೀ. ವ್ಯಾಪ್ತಿ)ಯಲ್ಲಿ ಸೆಪ್ಟಂಬರ್ 4 ರಂದು ಬೆಳಗ್ಗೆ 6 ಗಂಟೆಯಿಂದ ಸೆಪ್ಟಂಬರ್ 5 ರ ಬೆಳಗ್ಗೆ 6 ಗಂಟೆಯವರೆಗೆ.
ಉಡುಪಿ ನಗರ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಅಂಬಲಪಾಡಿ, ಪುತ್ತೂರಿನಲ್ಲಿ (6 ಕಿ.ಮೀ. ವ್ಯಾಪ್ತಿ) ಸೆಪ್ಟಂಬರ್ 5 ರಂದು ಬೆಳಗ್ಗೆ 11 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ.
ಬೈಂದೂರು ಠಾಣಾ ವ್ಯಾಪ್ತಿಯ ಗ್ರಾಮಗಳಾದ ಯಡ್ತೆರೆ, ಬೈಂದೂರಿನಲ್ಲಿ (5 ಕಿ.ಮೀ. ವ್ಯಾಪ್ತಿ) ಸೆಪ್ಟಂಬರ್ 6 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ.
ಬೈಂದೂರು ಠಾಣಾ ವ್ಯಾಪ್ತಿಯ ಗ್ರಾಮಗಳಾದ ಬಿಜೂರು, ಉಪ್ಪುಂದದಲ್ಲಿ (4 ಕಿ.ಮೀ. ವ್ಯಾಪ್ತಿ) ಸೆಪ್ಟಂಬರ್ 6 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ.
ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ, ಹೊಸಾಡು, ತ್ರಾಸಿ ಗ್ರಾಮಗಳಲ್ಲಿ (9 ಕಿ.ಮೀ. ವ್ಯಾಪ್ತಿ) ಸೆಪ್ಟಂಬರ್ 6 ರಂದು ಬೆಳಗ್ಗೆ 6 ರಿಂದ ಸೆಪ್ಟಂಬರ್ 7 ರ ಬೆಳಗ್ಗೆ 6 ರ ವರೆಗೆ.
ಕುಂದಾಪುರ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಕುಂದಾಪುರ, ಕಸಬಾ, ವಡೇರ ಹೋಬಳಿ, ಹಂಗಳೂರು, ಕೋಟೇಶ್ವರದಲ್ಲಿ ಸೆಪ್ಟಂಬರ್ 6 ರಂದು ಮಧ್ಯಾಹ್ನ 12 ಗಂಟೆಯಿಂದ ಸೆಪ್ಟಂಬರ್ 7 ರ ಬೆಳಗ್ಗೆ 7 ಗಂಟೆಯವರೆಗೆ.
ಉಡುಪಿ ನಗರ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಮೂಡನಿಡಂಬೂರು, ಶಿವಳ್ಳಿಯಲ್ಲಿ (4 ಕಿ.ಮೀ. ವ್ಯಾಪ್ತಿ) ಸೆಪ್ಟಂಬರ್ 6 ರಂದು 11 ಗಂಟೆಯಿಂದ 23 ಗಂಟೆಯವರೆಗೆ.
ಕೋಟ ಠಾಣಾ ವ್ಯಾಪ್ತಿಯ ಗ್ರಾಮವಾದ ಗುಂಡ್ಮಿಯಲ್ಲಿ ಸೆಪ್ಟಂಬರ್ 6 ರಂದು 15 ಗಂಟೆಯಿಂದ 23 ಗಂಟೆಯವರೆಗೆ.
ಕೋಟ ಠಾಣಾ ವ್ಯಾಪ್ತಿಯ ಗ್ರಾಮವಾದ ಗಿಳಿಯಾರಿನಲ್ಲಿ ಸೆಪ್ಟಂಬರ್ 7 ರಂದು 16 ಗಂಟೆಯಿಂದ 24 ಗಂಟೆಯವರೆಗೆ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ ಶಾಪ್ ಗಳಲ್ಲಿ ಮದ್ಯ ಮಾರಾಟವನ್ನು ಮೇಲೆ ತಿಳಿಸಲಾದ ದಿನಾಂಕದಂದು ಮುಚ್ಚಲು ಆದೇಶಿಸಿದ್ದು, ಉಡುಪಿ ಮತ್ತು ಕುಂದಾಪುರ ಪೊಲೀಸ್ ಉಪ ವಿಭಾಗದ ಸರಹದ್ದಿನ ಗ್ರಾಮಗಳ ವ್ಯಾಪ್ತಿಯಲ್ಲಿ ಡ್ರೈ ಡೇ ಎಂದು ಘೋಷಿಸಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.