ಮಂಗಳೂರು,ಆ 29 (Daijiworld News/RD): ನಗರದ ಖಾಸಗಿ ಕಾಲೇಜುವೊಂದರ ವಿದ್ಯಾರ್ಥಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಆ.29ರ ಗುರುವಾರ ನಡೆದಿದೆ.
ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ಸೈನ್ಸ್ ವಿದ್ಯಾರ್ಥಿ ಪ್ರತೀಕ್ (18 ) ಆತ್ಮಹತ್ಯೆಗೈದ ವಿದ್ಯಾರ್ಥಿ. ಈತನ ತಂದೆ ಕಮಲಾಕ್ಷ ಹಾಗೂ ತಾಯಿ ಪದ್ಮಾಕ್ಷಿ ಕಂಕನಾಡಿಯ ಖಾಸಗಿ ಕೋ-ಆಪರೇಟಿವ್ ಬ್ಯಾಂಕ್ ಉದ್ಯೋಗಿಗಳಾಗಿದ್ದು , ಗುರುವಾರ ತರಗತಿಗೆ ರಜೆ ಎಂದು ಪ್ರತೀಕ್ ಮನೆಯಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.