ಉಡುಪಿ,ಆ 27 (Daijiworld News/RD): ಉಡುಪಿಯ ಕಾಂಗ್ರೆಸ್ ಪಕ್ಷದ ನಗರಸಭೆಯ ಸದಸ್ಯರು ಜಿಲ್ಲೆಗೆ ನೂತನವಾಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಜಿ.ಜಗದೀಶ್ ಅವರನ್ನು ಭೇಟಿಯಾಗಿ ಇಂದು ಅಭಿನಂದನೆ ಸಲ್ಲಿಸಿದರು.
ನಂತರ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಪರಿಸರದ ಸಾರ್ವಜನಿಕ ಸಮಸ್ಯೆ ಸ್ಪಂದಿಸುವ ಬಗ್ಗೆ ಮನವಿ ಸಲ್ಲಿಸಿದರು. ಉಡುಪಿಯಲ್ಲಿ ಸಮಸ್ಯೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು ಉಡುಪಿಯ ಅಭಿವೃದ್ಧಿ ಕಾರ್ಯದಲ್ಲಿ ತಮ್ಮ ಜೊತೆಗೆ ಇರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಗರದ ನಗರಸಭೆ ಸದಸ್ಯರಾದ ರಮೇಶ್ ಕಾಂಚನ್, ವಿಜಯ್ ಪೂಜಾರಿ ಬೈಲೂರು, ಅಮೃತ ಕೃಷ್ಣಮೂರ್ತಿ, ಸೇಲಿನಾ ಕರ್ಕಾಡ, ಮಾಜಿ ನಗರಸಭಾ ಅಧ್ಯಕ್ಷರಾದ ಮೀನಾಕ್ಷಿ ಮಾಧವ್, ಮಾಜಿ ನಗರಸಭಾ ಉಪಾಧ್ಯಕ್ಷರಾದ ಸಂಧ್ಯಾ ತಿಲಕ್, ಮಾಜಿ ನಗರಸಭಾ ಸದಸ್ಯರಾದ ಶಶಿರಾಜ್ ಕುಂದರ್, ಆರ್.ಕೆ.ರಮೇಶ್, ಶಾಂತ್ ರಾಮ್ ಸಾಲಂಸ್ಕರ್ ಉಪಸ್ಥಿತರಿದ್ದರು.