ಮಂಗಳೂರು, ಆ.26(Daijiworld News/SS): ರಾಮ ಮತ್ತು ಕೃಷ್ಣ ನಮ್ಮ ಎರಡು ಕಣ್ಣುಗಳಿದ್ದಂತೆ. ರಾಮನ ಆದರ್ಶ ಕೃಷ್ಣನ ಚಾಣಾಕ್ಷತನ ನಮ್ಮಲ್ಲಿ ಮೈಗೂಡಿಸಿಕೊಂಡಲ್ಲಿ ನಾವು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದು ಸಂಸ್ಕೃತ ವಿದ್ವಾಂಸ ಸೋಂದ ಭಾಸ್ಕರ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಕ್ಷೇತ್ರ ಇದರ ವತಿಯಿಂದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೋಸರು ಕುಡಿಕೆ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಿದರು. ಭಗವದ್ಗೀತೆಯ ಸಾರವನ್ನು ಮೈಗೂಡಿಸಿಕೊಂಡಾಗ ಲೋಕಮಾನ್ಯ ಆಗುತ್ತೇವೆ. ಭಾರತೀಯ ಸಂಸ್ಕೃತಿಯ ಸಾರವನ್ನು ವಿದೇಶಿಯರು ಪಡೆಯುತ್ತಿದ್ದಾರೆ. ನಮ್ಮ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ತಿಳಿ ಹೇಳಬೇಕು ಎಂದು ಸಲಹೆ ನೀಡಿದರು.
ಎಂಆರ್'ಪಿಎಲ್ ಆಡಳಿತ ನಿರ್ದೇಶಕ ಎಂ.ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಪೋರೇಶನ್ ಬ್ಯಾಂಕ್ ವಲಯ ಮುಖ್ಯಸ್ಥ, ಉಪ ಮಹಾಪ್ರಬಂಧಕ ಜಗನ್ನಾಥ ಶೆಟ್ಟಿ, ಎಂಎಸ್'ಇಝೆಡ್ ನಿಶಾಂತ್ ಭಾಗವಹಿಸಿದ್ದರು.