ಮಂಗಳೂರು, ಆ 25 (Daijiworld News/RD): ಕುಂಪಲ ವಿದ್ಯಾನಗರದ ಬಾವಿಯಲ್ಲಿ ಹುಲಿವೇಷಧಾರಿಯ ಮೃತದೇಹ ಪತ್ತೆಯಾಗಿದ್ದು, ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಮೃತ ವ್ಯಕ್ತಿ ಮುಳಿಹಿತ್ಲು ನಿವಾಸಿ ವಸಂತ್(57)ಎಂದು ಗುರುತಿಸಲಾಗಿದೆ. ಅವರು ಮಂಗಳೂರಿನಲ್ಲಿ ವೆಲ್ಡಿಂಗ್ ಮಾಡುತ್ತಿದ್ದರು.
ಮೊಸರು ಕುಡಿಕೆ ಉತ್ಸವಕ್ಕಾಗಿ ಶುಕ್ರವಾರ ರಾತ್ರಿ ರಂಗಿಗೆ ನಿಂತಿದ್ದ ವಸಂತ್, ಸಮೀಪದಲ್ಲಿದ್ದ ಸಂಬಂಧಿಕರ ಮನೆಯ ಬಾವಿಯ ಕಟ್ಟೆಯ ಬಳಿ ಕುಳಿತುಕೊಂಡಿದ್ದು, ನಿದ್ದೆಯ ಮಂಪರಿನಲ್ಲಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಶನಿವಾರ ಮಧ್ಯಾಹ್ನ ಅವರಿಗಾಗಿ ಎಲ್ಲಡೆ ಹುಡುಕಾಟ ನಡೆಸಿದ್ದರು. ಸಂಜೆಯ ವೇಳೆಯಲ್ಲಿ ಕುಂಪಲದ ಬಾವಿಯಲ್ಲಿ ಟೋಪಿ ತೇಲುತ್ತಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.