ಉಡುಪಿ, ಆ 24 (Daijiworld News/RD): ಜಗತ್ಪಾಲಕನಾದ ವಿಷ್ಣುವಿನ ಅವತಾರವಾದ ಶ್ರೀಕೃಷ್ಣನ ಜನ್ಮದಿನದ ಶುಭಮಹೋತ್ಸವವೇ, ಶ್ರೀಕೃಷ್ಣ ಜನ್ಮಾಷ್ಠಮಿ. ಅಷ್ಠಮಠಗಳಿಗೆ ಪ್ರಸಿದ್ಧಿಯಾದ ಉಡುಪಿಯಲ್ಲಿ, ಶ್ರೀಕೃಷ್ಣ ಜನ್ಮಾಷ್ಠಮಿಯು ಬಹಳ ಅದ್ದೂರಿಯಾಗಿ ನಡೆಯುತ್ತದೆ. ಕೃಷ್ಣ ಜನ್ಮಾಷ್ಠಮಿಯಂದು, ಇಡೀ ಉಡುಪಿ ಕೃಷ್ಣನ ಸ್ಮರಣೆಯಲ್ಲಿ ಮುಳುಗಿರುತ್ತದೆ. ಆಗಸ್ಟ್ 23 ರಂದು ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತಿದೆ.
ಮುದ್ದಾದ ಕೃಷ್ಣನಿಗೆ ನಮಿಸಿ ಭಜಿಸುವ ಈ ಶುಭದಿನದಂದು, ಉಡುಪಿ ಸುತ್ತೆಲ್ಲಾ ರಂಗು ರಂಗಿನ ಮುದ್ದಾದ ಕೃಷ್ಣನದ್ದೇ ಕಲರವ. ಅಂದು ಕೃಷ್ಣನಗರಿಯಲ್ಲಿ, ಮೊಸರು ಕುಡಿಕೆ, ಹುಲಿ ವೇಷದ ಕುಣಿತ ಹಾಗೂ ಛದ್ಮ ವೇಷ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಮುದ್ದು ಕೃಷ್ಣನ ವೇಷ ಧರಿಸಿ, ಕೃಷ್ಣನ ತುಂಟತನವನ್ನ ತಮ್ಮ ಮಕ್ಕಳಲ್ಲಿ ಕಂಡು, ಮನದಲ್ಲೇ ಆರಾಧಿಸುತ್ತಾರೆ.
ಈ ಹಿಂದೆ ಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ಮುದ್ದು ಕೃಷ್ಣ ಭಾವಚಿತ್ರ ಸ್ಪರ್ಧೆಯನ್ನು ಆಯೋಜಿಸದ ದಾಯ್ಜಿವರ್ಲ್ಡ್ ಉಡುಪಿ, ಈ ಸಾಲಿನ ಕೃಷ್ಣಜನ್ಮಾಷ್ಠಮಿಯಂದು ವಿಭಿನ್ನ ಸ್ಪರ್ಧೆಯೊಂದನ್ನು ನಿಮಗಾಗಿ ಆಯೋಜಿಸಿದೆ. ಅದುವೇ ’ಯಶೋನಂದಲಾಲ ಛಾಯಾಚಿತ್ರ’ ಸ್ಪರ್ಧ. ಪೋಷಕರು ತಮ್ಮ ಮಗುವಿಗೆ ಮುದ್ದಾದ ಕೃಷ್ಣನ ವೇಷಧರಿಸಿ, ಆತನ ತುಂಟಾಟಗಳನ್ನು ನೋಡಿ ಆನಂದಿಸುವುದು ಮಾತ್ರವಲ್ಲದೆ, ಮಗುವಿನ ಜೊತೆ ತಾಯಿ ಕೂಡ ಯಶೋಧೆಯ ವೇಷ ಧರಿಸಿ ಫೋಟೋ ಕ್ಲಕ್ಕಿಸಿ ಸ್ಪರ್ಧೆಯಲ್ಲಿ ಭಾಗಿವಹಿಸುವ ಅವಕಾಶ ಇದಾಗಿದೆ. ತಾಯಿ ಹಾಗೂ ಮಗುವಿನ ಮುದ್ದಾದ ಯಶೋಧ ಕೃಷ್ಣ ವೇಷದಲ್ಲಿರುವ 3 ಭಂಗಿಯ 3 ಫೋಟೋಗಳನ್ನ ಕಳುಹಿಸಬೇಕು.
ಈ ಸ್ಪರ್ಧೆಯಲ್ಲಿ ಭಾಗವಹಿಸಲು, ನಿಯಮಗಳು ಮತ್ತು ಷರತ್ತುಗಳು ಅನ್ವಹಿಸುತ್ತದೆ. ಎಡಿಟೆಡ್ ಆಗಿರುವ ಮತ್ತು ವಾಟರ್ಮಾರ್ಕ್ ಬಳಸಿದ ಫೋಟೋಗಳನ್ನ ಸ್ವೀಕರಿಸಲಾಗುವುದಿಲ್ಲ. ಫೋಟೋಗಳು ಸ್ಪಷ್ಟವಾಗಿದ್ದು, 5*7 ಗಳಿರಬೇಕು. ಆಗಸ್ಟ್ 26 ರ ನಂತರ ಬಂದ ಫೋಟೋಗಳನ್ನ ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ. ತಾಯಿ- ಮಗು ಮಾತ್ರ ಜೊತೆಯಲ್ಲಿರುವ, ಯಶೋಧ-ಕೃಷ್ಣ ವೇಷದ 3 ಭಂಗಿಯ 3 ವಿವಿಧ ಫೋಟೋಗಳನ್ನ udupidaijiworld@gmail.com ಇದಕ್ಕೆ ಇಮೇಲ್ ಮಾಡುವ ಮುಖಾಂತರ ನಮಗೆ ಕಳುಹಿಸಿ.
ತಾಯಿಯ ವಯೋಮಿತಿ 20 ರಿಂದ 25 ರ ಒಳಗಿರಬೇಕು. 3 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶ (26 ಆಗಸ್ಟ್, 2019ರ ಒಳಗಿನ). ಮಗುವಿನ ಜನನ ಪ್ರಮಾಣ ಪತ್ರ ಮತ್ತು ತಾಯಿಯ ಗುರುತಿನ ಚೀಟಿ ಲಗತ್ತಿಸಬೇಕು. ಫೋಟೋಗಳೊಂದಿಗೆ ಹೆತ್ತವರ ಸರಿಯಾದ ವಿಳಾಸ ಹಾಗು ದೂರವಾಣಿ ಸಂಖ್ಯೆ ಇರಬೇಕು. ತೀರ್ಮಾನಕಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
"ಯಶೋನಂದಲಾಲ ಛಾಯಾಚಿತ್ರ ಸ್ಪರ್ಧೆ"ಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರೂ 3333 ನಗದು ಬಹುಮಾನದ ಜೊತೆಗೆ ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ದ್ವಿತೀಯ ಸ್ಥಾನ ಪಡೆದವರಿಗೆ ರೂ2,222 ನಗದು ಬಹುಮಾನ, ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಇನ್ನು ತೃತೀಯ ಸ್ಥಾನ ಗಳಿಸಿದವರಿಗೆ, ರೂ 1111 ನಗದು ಬಹುಮಾನದ ಜೊತೆಗೆ ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಅಲ್ಲದೆ 5 ಸಮಾಧಾನಕರ ಬಹುಮಾನವನ್ನೂ ನೀಡಲಾಗುತ್ತದೆ.