ಉಡುಪಿ, ಆ 23 (DaijiworldNews/SM): ಶ್ರೀ ಕೃಷ್ಟ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಜಿಲ್ಲಾ ಪೊಲೀಸರು ಬಂದೋಬಸ್ತ್ ಹಾಗೂ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಬಂದೋಬಸ್ತ್ಗೆ ಓರ್ವ ಡಿ.ವೈ.ಎಸ್.ಪಿ, ೪ ಪೊಲೀಸ್ ನಿರೀಕ್ಷಕರು, ೧೨ ಪೊಲೀಸ್ ಸಬ್ಇನ್ಸ್ಪೆಕ್ಟರ್ಸ್, ೩೯ ಸಹಾಯಕ ಪೊಲೀಸ್ ಸಬ್ಇನ್ಸ್ಪೆಕ್ಟರ್ಸ್, ೨೩೬ ಪೊಲೀಸ್ ಸಿಬ್ಬಂದಿಗಳು, ೪೦ ಹೋಂ ಗಾರ್ಡ್, ೧ ಕ್ವಿಕ್ ರಿಯ್ಯಾಕ್ಷನ್ ಟೀಮ್, ೧ ವಿದ್ವಂಸಕ ಕೃತ್ಯ ತಪಾಸಣಾ ತಂಡ, ೩ ಜಿಲ್ಲಾ ಸಶಸ್ತ್ರ ಪಡೆಯ ತುಕಡಿ ಹಾಗೂ ೨ ಕೆ.ಎಸ್.ಆರ್.ಪಿ. ತುಕಡಿಗಳನ್ನು ಬಳಸಿಕೊಳ್ಳಲಾಗಿದೆ.
ದೇವಸ್ಥಾನ, ಕಾರ್ಯಕ್ರಮಗಳ ಸ್ಥಳ, ಅನ್ನಸಂತರ್ಪಣೆ, ಮೊಸರುಕುಡಿಕೆ ಮೆರವಣಿಗೆ ಸ್ಥಳ ಮುಂತಾದ ಸ್ಥಳಗಳಲ್ಲಿ ಬಂದೋಬಸ್ತ್ ಬಗ್ಗೆ ಅಧಿಕಾರಿ / ಸಿಬ್ಬಂದಿಯವರನ್ನು ನಿಯುಕ್ತಿಗೊಳಿಸಿದ್ದು, ಸಂಚಾರ ನಿಯಂತ್ರಣಕ್ಕೆ ಸಂಚಾರ ವಿಭಾಗದ ಅಧಿಕಾರಿ / ಸಿಬ್ಬಂದಿಯವರನ್ನು ಬಳಸಿಕೊಳ್ಳಲಾಗಿದೆ.
ಅಲ್ಲದೆ ದ್ವಿಚಕ್ರ ಮೊಬೈಲ್ ರೌಂಡ್ಸ್ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ. ಆಯಕಟ್ಟಿನ ೮ ಕಡೆಗಳಲ್ಲಿ ವೀಡೀಯೋಗ್ರಾಫಿ ನಡೆಸಲಾಗುವುದು ಹಾಗೂ ೨ ವೀಡೀಯೋಗ್ರಾಫಿಯನ್ನು ಮೊಸರುಕುಡಿಕೆ ಮೆರವಣಿಗೆಯಲ್ಲಿ ಬಳಸಿಕೊಳ್ಳಲಾಗುವುದು. ಸಿಸಿ ಕೆಮರಾ ವೀಕ್ಷಣೆಗೆ ಸಿಬ್ಬಂದಿಯವರನ್ನು ನೇಮಿಸಲಾಗಿದೆ ಎಂದರು.