ಬೆಳ್ತಂಗಡಿ, ಆ 22 (DaijiworldNews/SM): ಒಂದು ಸಮುದಾಯದ ಗುಂಪೊಂದು ಮತ್ತೊಂದು ಧರ್ಮದ ಹೆಸರಿನಲ್ಲಿ ವಾಟ್ಸಾಪ್ ಗ್ರೂಪೊಂದನ್ನು ರಚಿಸಿ ಅದರಲ್ಲಿ ಹಿಂದೂ ದೇವರ ದೇವತೆಗಳನ್ನು ನಿಂದಿಸಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೋಲಿಸರು ಮೂವರು ಯುವಕರನ್ನು ಬಂಧಿಸಿದ್ದಾರೆ.
ಅಲ್ಲದೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಅವರ ಪೈಕಿ ಇಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಮೀಝ್ ವಿಟ್ಲ ಹಾಗೂ ಅಬ್ದುಲ್ ಸಲಾಂ ಬಂಧಿತ ಆರೋಪಿಗಳಾಗಿದ್ದಾರೆ.
ಸಮುದಾಯವೊಂದರ ಸುಮಾರು 39 ಮಂದಿ ಯುವಕರು ಸೇರಿಕೊಂಡಿರುವ ಶಿವಾಜಿ ಹೆಸರಿನ ವಾಟ್ಸಪ್ ಗ್ರೂಪೊಂದರಲ್ಲಿ ಅನ್ಯ ಕೋಮಿನ ಯುವಕನನ್ನು ಕೂಡ ಸೇರಿಸಿದ್ದರು. ಬಳಿಕ ಹಿಂದೂ ದೇವರುಗಳಿಗೆ ಅವಮಾನಿಸಲು ಆರಂಭಿಸಿದ್ದರು. ಹಾಗೂ ಬೇರೆ ಬೇರೆ ರೀತಿಯಲ್ಲಿ ನಿಂದಿಸುತ್ತಿದ್ದರು. ಆರಂಭದಲ್ಲಿ ಸುಮ್ಮನಿದ್ದ ಯುವಕ ಬಳಿಕ ಅವಮಾನ ಸಹಿಸಲಾಗದೆ, ಆಡಿಯೋ ಸಂದೇಶ ರವಾನಿದ್ದರು.
ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.