ಮಂಗಳೂರು, ಆ 22 (Daijiworld News/MSP): ಶ್ರೀಕೃಷ್ಣನು ಬಡವರ್ಗದವರೂ ಉತ್ತಮವಾಗಿ ಹಬ್ಬಹರಿದಿನ ಆಚರಿಸಲೆಂದು ದಾನಧರ್ಮಗಳನ್ನು ಮಾಡುತ್ತಿದ್ದನೆಂಬ ಪ್ರತೀತಿಯಿದೆ. ಇಂತಹ ಕಾರ್ಯದಲ್ಲಿ ಮಾಜಿ ಮೇಯರ್ ಕವಿತಾ ಸನಿಲ್ ಅವರು ಕಳೆದ ನಾಲ್ಕೈದು ವರ್ಷಗಳಿಂದ ಪಚ್ಚನಾಡಿಯಲ್ಲಿ ಬಡವರ್ಗಕ್ಕೆ ಉಚಿತ ಅಕ್ಕಿ ವಿತರಣೆ ಮಾಡುತ್ತಾ ಬರುತ್ತಿದ್ದಾರೆ. ಇವರ ಈ ಕಾಯಕ ಶ್ರೀಕೃಷ್ಣನ ಪೂಜೆಗೆ ಸಮಾನ ಎಂದು ಕಟೀಲು ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಪಚ್ಚನಾಡಿಯ ಕಾರ್ಮಿಕ ನಗರದ ರಂಗ ಮಂದಿರದಲ್ಲಿ ಬುಧವಾರ 1500 ಕುಟುಂಬಗಳಿಗೆ ಮಾಜಿ ಮೇಯರ್ ಕವಿತ ಸನಿಲ್ ಅವರು ಹಮ್ಮಿಕೊಂಡಿದ್ದ ಅಕ್ಕಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಧರ್ಮಗುರು ಆ್ಯಂಡ್ರೋ ಲಿಯೋ ಡಿಸೋಜ ಮಾತನಾಡಿ ಬಡ ವರ್ಗದವರ ಬಗ್ಗೆ ಕಾಳಜಿ ತೋರುವವನು ದೇವರ ಪ್ರೀತಿಗೆ ಪಾತ್ರನಾಗುತ್ತಾನೆ. ಸಮಾಜದಲ್ಲಿ ಬಡವರ ಕಣ್ಣೀರು ಒರೆಸುವ ಮನೋಭಾವವುಳ್ಳ ಜನರು ಹೆಚ್ಚಾದಾಗ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ.ಈ ನಿಟ್ಟಿನಲ್ಲಿ ಕವಿತಸನಿಲ್ ಅವರ ಸೇವೆ ಶ್ಲಾಘನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕವಿತಸನಿಲ್ ಅವರು ಕಳೆದ ನಾಲ್ಕೈದು ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭ ಮಾಡುತ್ತಾ ಬಂದಿದ್ದೇನೆ. ಸಮಾಜದಿಂದ ಗಳಿಸಿದ್ದರಲ್ಲಿ ಒಂದಿಷ್ಟು ಸಮಾಜಕ್ಕೆ ಅರ್ಪಿಸಿದಾಗ ಮನಸ್ಸಿಗೆ ಸಂತಸವಾಗುತ್ತದೆ ಎಂದರು.
ಸ ಭೆಯಲ್ಲಿ ಅತಿಥಿಗಳಾದ ಪುರುಷೋತ್ತಮ್ ಕೊಟ್ಟಾರಿ, ರಘುರಾಮ್ ಶೆಟ್ಟಿ,ಸತೀಶ್ ಬಂದಲೆ,ವಿಠಲ ಶೆಟ್ಟಿ, ಜಗದೀಶ್ ಪೂಜಾರಿ, ಸಂಜೀವ ಕುಂದರ್,ಸ್ಟೀವನ್ ಡಿ ಸಿಲ್ವಾ, ಶಂಕರ ಶೆಟ್ಟಿ,ಅನಿಲ್ ಸಲ್ದಾನ,ಲತ ರೈ ಮತ್ತಿತರರು ಉಪಸ್ಥಿತರಿದ್ದರು.