ಸುಳ್ಯ, ಆ 21 (DaijiworldNews/SM): ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ನೀಡದಿರುವ ಹಿನ್ನಲೆಯಲ್ಲಿ ಸುಳ್ಯ ಬಿಜೆಪಿ ಪಕ್ಷದ ವತಿಯಿಂದ ತೆಗೆದುಕೊಳ್ಳಬಹುದಾದದ ನಿರ್ಣಯದ ಬಗ್ಗೆ ಸುಳ್ಯ ಬಿಜೆಪಿ ಕಚೇರಿಯಲ್ಲಿ ಕಾರ್ಯರ್ತರ ಸಭೆ ಕರೆಲಾಗಿತ್ತು. ಇದಕ್ಕೆ ತೆರೆಳಿದ ಪತ್ರಕರ್ತರನ್ನು ದ್ವಾರದ ಬಳಿ ಇದ್ದ ಕಾರ್ಯಕರ್ತರು ತಡೆದ ಘಟನೆ ನಡೆದಿದೆ.
ಪತ್ರಕರ್ತರನ್ನು ತಡೆದ ಕಾರ್ಯಕರ್ತರು, ನಿಮಗೆ ಪ್ರವೇಶವಿಲ್ಲ ಎಂದು ಹೇಳಿ ವಾಪಸ್ ಕಳುಹಿಸಿದ ಘಟನೆ ನಡೆದಿದೆ. ಇದರಿಂದ ಅಸಮಾಧಾನಗೊಂಡ ಪತ್ರಕರ್ತರು, ಬಳಿಕ ಪ್ರೆಸ್ಕ್ಲಬ್ನಲ್ಲಿ ಬಿಜೆಪಿ ವತಿಯಿಂದ ಕರೆಯಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ನಾವು ಶಾಸಕರಿಗೆ ಸಚಿವ ಸ್ಥಾನ ಕೊಡುವುದು ಬೇಡ ಎಂದು ಎಲ್ಲಿ ಹೇಳಿಲ್ಲ. ನಾವು ಸ್ಥಳೀಯರಾಗಿದ್ದುಕೊಂಡು ಏಕೆ ನಮಗೆ ಪ್ರವೇಶ ನಿಷೇದ ಮಾಡಿದ್ದೀರಿ ನಿಷೇದ ಇದ್ದರೆ ಮೊದಲೆ ತಿಳಿಸಬೇಕೆಂದು ಪತ್ರಕರ್ತರು ಬಿ.ಜೆ.ಪಿ ನಾಯಕರನ್ನು ಪ್ರಶ್ನಿಸಿದರು.
ಅದಕ್ಕೆ ಪ್ರತ್ಯುತ್ತರ ನೀಡಿದ ನಾಯಕರು ನಮ್ಮಿಂದ ತಪ್ಪು ಆಗಿದ್ದರೆ ನಾವು ಕ್ಷಮೆಯಾಚನೆ ಮಾಡುತ್ತೇವೆ ಎಂದು ಹೇಳಿದರು.
ಇನ್ನು ಈಗಾಗಲೇ ಜಿಲ್ಲೆಯ ಮಾಧ್ಯಮಗಳು ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಾಕಷ್ಟು ಸುದ್ದಿಗಳನ್ನು ಪ್ರಸಾರ ಮಾಡಿದ್ದವು. ಅಲ್ಲದೆ, ಸರಕಾರದ ಮೇಲೆ ಒತ್ತಡ ಹೇರುವ ಯತ್ನವನ್ನು ಕೂಡ ಮಾಡಿವೆ.