ಮೂಡಬಿದಿರೆ, ಆ 21 (DaijiworldNews/SM):ಇಲ್ಲಿನ ಸಾವಿರ ಕಂಬ ಬಸದಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಡಬಿದಿರೆಯ ವಿಶಾಲ್ ನಗರ ಮಾರಿಗುಡಿ ಬಳಿಯ ನಿವಾಸಿ ಪುನೀತ್ ಶೆಟ್ಟಿ ಬಂಧಿತ ಆರೋಪಿ.
ಜುಲೈ 1 ಮತ್ತು 2ರ ಮಧ್ಯಾವಧಿಯಲ್ಲಿ ಬಸದಿಯ ಮುಖ್ಯ ದ್ವಾರದ ಬೀಗವನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಭೈರಾದೇವಿ ಮಂಟಪದಲ್ಲಿದ್ದ ಎರಡು ಕಾಣಿಕೆ ಡಬ್ಬಿ ಮತ್ತು ಚಿತ್ರಾದೇವಿ ಮಂಟಪದಲ್ಲಿದ್ದ ಒಂದು ಕಾಣಿಕೆ ಡಬ್ಬಿಗಳ ಬೀಗವನ್ನು ಒಡೆದು ಕಳ್ಳತನಕ್ಕೆ ಪ್ರಯತ್ನ ನಡೆಸಿದ್ದರು. ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧಿಸಿ ಮಂಗಳೂರು ನಗರ ಮತ್ತು ಮೂಡಬಿದಿರೆ ಪೊಲೀಸರ ಜಂಟಿ ಕಾರಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.