ಬೆಳ್ತಂಗಡಿ,ಆ 19 (Daijiworld News/RD): ಕಳೆದ ಹಲವು ದಿನಗಳಲ್ಲಿ ಸುರಿದ ಭಾರೀ ಮಳೆಗೆ, ಬಂಜಾರು ಮೆಲೆಕುಡಿಯ ಕಾಲೋನಿಗೆ ಸಂಪರ್ಕಿಸುವ ಸೇತುವೆ ಕುಸಿದು ಬಿದ್ದು, ಪಿಡಬ್ಯೂಡಿ ಮತ್ತು ಮಾಸ್ಟರ್ ಪ್ಲಾನರಿಯಿಂದ ನೂತನ ಸೇತುವೆಯನ್ನು ನಿರ್ಮಾಣ ಮಾಡಲಾಯಿತು. ಈ ಸೇತುವೆ ಕೇವಲ 24 ಗಂಟೆಗಳಲ್ಲಿ ನಿರ್ಮಾಣವಾಗಿದೆ. ಈ ನೂತನ ಸೇತುವೆಯಲ್ಲಿ ಪ್ರಾಯೋಗಿಕವಾಗಿ ಸಂಚರಿಸುವ ಮೂಲಕ ಪರಿಶೀಲನೆ ನಡೆಸಿದ್ದು, ಇದೀಗ ಸೇತುವೆಯಲ್ಲಿ ಸಂಚರಿಸಲು ಅನವು ಮಾಡಿದೆ.
ದಟ್ಟವಾಗಿ ಹಬ್ಬಿದ ಕಾನನದ ನಡುವೆ ಇರುವ ಬಂಜಾರು ಮಲೆಕುಡಿಯ ಕಾಲೋನಿ, ಒಟ್ಟು 47 ಕುಟುಂಬಗಳು ಈ ಕಾನನದಲ್ಲಿ ಬದುಕು ಸಾಗಿಸುತ್ತಿವೆ. ಮಳೆಯಿಂದಾಗಿ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಸಂಚರಿಸಲು ಸಾಧ್ಯವಾಗದೆ ಜನರು ತೀರಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಈ ಸಂದರ್ಭದಲ್ಲಿ ಮಾಜಿ ಯೋಧ, ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮಲೆಕುಡಿಯ ಕಾಲೋನಿಗೆ ತೆರಳಿ, ಅಲ್ಲಿನ ನಿವಾಸಿಗಳಿಗೆ ಅಕ್ಕಿ ಆಹಾರೋತ್ಪನ್ನಗಳನ್ನು ತಾವೇ ಖುದ್ದಾಗಿ ಸಾಗಿಸಿ ಸರಳತೆ ಮೆರೆದಿದ್ದರು.