ಕಾಸರಗೋಡು,ಆ 17 (Daijiworld News/RD): ಇಲ್ಲಿನ ಸಮೀಪದ ಚಂದ್ರಗಿರಿ ಸೇತುವೆಯಿಂದ ವ್ಯಕ್ತಿಯೋರ್ವ ನದಿಗೆ ಹಾರಿದ ಘಟನೆ ಆ 17 ರ ಶನಿವಾರ ಮಧ್ಯಾಹ್ನ ನಡೆದಿದೆ. ನಗರದ ಹೊರವಲಯದ ಅಣಂಗೂರಿನ ಅಶೋಕ್ (45) ನದಿಗೆ ಹಾರಿದ ವ್ಯಕ್ತಿ ಎಂದು ಶಂಕಿಸಲಾಗಿದೆ .
ಸೇತುವೆ ಬಳಿ ಇವರ ಸ್ಕೂಟರ್ ನಿಲ್ಲಿಸಿದ ಬಳಿಕ ಜನರು ನೋಡುತ್ತಿದ್ದಾನಂತೆ ನದಿಗೆ ಹಾರಿದ್ದು, ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತಲಪಿದ ಅಗ್ನಿಶಾಮಕ ದಳದ ಸಿಬಂದಿಗಳು, ಪೊಲೀಸರು ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸೇತುವೆ ಬಳಿಯಿದ್ದ, ಸ್ಕೂಟರ್ ನಲ್ಲಿ ಅಶೋಕ್ ರವರ ಮೊಬೈಲ್ ಫೋನ್, ಪರ್ಸ್, ಬೈಕ್ ನ ಆರ್ ಸಿ ದಾಖಲೆ ಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಕಾಸರಗೋಡು ಶಾಸಕ ಎನ್. ಎ ನೆಲ್ಲಿಕುನ್ನು ಮೊದಲಾದವರು ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.