ಕಾಸರಗೋಡು,ಆ 16 (Daijiworld News/RD): ಮಂಜೇಶ್ವರ ಕುಂಡುಕೊಳಕೆ ಬೀಚ್ ಪರಿಸರದಿಂದ ಅಕ್ರಮವಾಗಿ ಭಾರೀ ಪ್ರಮಾಣದಲ್ಲಿ ಮರಳು ಸಾಗಾಟ ನಡೆಸುತ್ತಿದ್ದು, ಸ್ಥಳೀಯರ ನಿದ್ದೆಗೆಡಿಸಿದೆ. ಮರಳು ಮಾಫಿಯಾದ ಅಕ್ರಮ ಸಾಗಾಟ ವಿರುದ್ಧ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದು , ಇದರಿಂದ ರೊಚ್ಚಿಗೆದ್ದ ನಾಗರಿಕರು ಅಕ್ರಮ ಮರಳು ಸಾಗಾಟ ಲಾರಿಗಳನ್ನು ತಡೆಡಿದ್ದಾರೆ . ಆದರೆ ಮಾರಾಕಾಸ್ತ್ರ ಸಹಿತ ಬೆದರಿಕೆಯೊಡ್ಡಿ ಲಾರಿಯಲ್ಲಿದ್ದ ಮರಳು ಮಾಫಿಯಾ ತಂಡ ನಾಲ್ಕು ಲಾರಿಗಳನ್ನು ಕೊಂಡೊಯ್ಯುವಲ್ಲಿ ಸಫಲವಾಗಿದೆ.
ಒಂದು ಲಾರಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ರಾತ್ರಿ ಸಮಯದಲ್ಲಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಕೆಲವೇ ಮೀಟರ್ ಗಳಷ್ಟು ದೂರದಲ್ಲಿ ಪೊಲೀಸ್ ಠಾಣೆ ಇದ್ದರೂ ಈ ಬಗ್ಗೆ ಗಮನ ನೀಡುತ್ತಿಲ್ಲ. ಈ ಪ್ರದೇಶಕ್ಕೆ ತೆರಳುವ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ. ಮಾತ್ರವಲ್ಲ. ರಸ್ತೆ ಬದಿಯ ಮನೆಯ ಗೇಟನ್ನು ತಂಡವು ಮುರಿದು ಹಾಕಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಮರಳು ಮಾಫಿಯಾ ದ ಕಿರುಕುಳ ಸಹಿಸದೆ ಪರಿಸರದ ವರು ಪ್ರತಿಭಟನೆಗೆ ಮುಂದಾಗು ವಂತೆ ಮಾಡಿದೆ.
ದಿನಂಪ್ರತಿ ನಂಬರ್ ಪ್ಲೇಟ್ ಗಳಿಲ್ಲದ ಐವತ್ತಕ್ಕೂ ಅಧಿಕ ಲಾರಿಗ ಳಲ್ಲಿ, ಪಿಕಪ್ ವ್ಯಾನ್ ಗಳಲ್ಲಿ ಮರಳು ಸಾಗಾಟ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಮರಳು ಸಾಗಾಟದ ಹಿಂದೆ ಪೊಲೀಸರು ಕೆಲ ರಾಜಕಾರಣಿಗಳ ಕೈವಾಡ ಇದೆ ಎಂಬ ಆರೋಪ ಕೇಳಿ ಬರುತ್ತಿದೆ.