ಮಂಗಳೂರು, ಆ.16(Daijiworld News/SS): ಬಾಲ್ಯದಲ್ಲಿಯೇ ಮಕ್ಕಳಿಗೆ ಮೌಲ್ಯವನ್ನು ಕಲಿಸುವ ಹೊಣೆಗಾರಿಕೆ ಪೋಷಕರ ಮೇಲಿದೆ ಎಂದು ಕುತ್ತಾರು ಬಾಲಸಂರಕ್ಷಣಾ ಕೇಂದ್ರದ ಸಂಚಾಲಕ ಡಾ ಅನಂತಕೃಷ್ಣ ಭಟ್ ನುಡಿದರು.
ಟೀಮ್ ವೀರಾಂಜನೇಯ ಫರಂಗಿಪೇಟೆ ವತಿಯಿಂದ ಜರುಗಿದ ಸ್ವಾತಂತ್ರ ದಿನಾಚರಣೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮವನ್ನು ಕುತ್ತಾರ್ನ ಬಾಲ ಸಂರಕ್ಷಣಾ ಕೇಂದ್ರದಲ್ಲಿ ಆಚರಿಸಿದ ವೇಳೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಬೆಳೆಯುತ್ತಿರುವ ಮಕ್ಕಳು ಸಾಗರ ದಂಡೆಯ ಮರಳಿನಂತೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅರ್ಕುಳ ಗ್ರಾಮ ಪಂಚಾಯತ್ ಸದಸ್ಯ ಸುಕುಮಾರ್ ಕರ್ಕೇರ, ಪ್ರಶಾಂತ್ ಪೂಜಾರಿ, ಲೋಹಿತ್ ಕರ್ಕೇರಾ, ಮಹಿಳಾ ಸದಸ್ಯೆ ಮಮತಾ ಕುತ್ತಾರು, ಚೈತ್ರಾಂಜಲಿ, ಸ್ವಾತಿ, ಕಾವ್ಯ ಮೊದಲಾದವರು ಉಪಸ್ಥಿತರಿದ್ದರು.