ಭಟ್ಕಳ,ಆ.16 (Daijiworld News/RD): ತಾಯಿ ಸ್ವಲ್ಪ ಗದರಿ ಬುದ್ಧಿವಾದ ಹೇಳಿದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈದೂಂರು ತಾಲೂಕಿನಲ್ಲಿ ಆ 19ರ, ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ.
ಸುಧೀಂದ್ರ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿಯಾದ 19 ವರ್ಷದ ಶ್ರುತಿ, ಬೈದೂಂರು ತಾಲೂಕಿನ ಆಳ್ವಗದ್ದೆ ನಿವಾಸಿ. ಕಲಿಕೆಯಲ್ಲಿ ಸ್ವಲ್ಪ ಹಿಂದೆ ಇದ್ದ ಶ್ರುತಿ, ಹಾಗಾಗಿ ಆಕೆಗೆ ತಾಯಿ ಆಗಾಗ ಚೆನ್ನಾಗಿ ಓದು ಎಂದು ತಾಯಿ ಬುದ್ದಿ ಮಾತು ಹೇಳುತ್ತಿದ್ದರು. ಬುಧವಾರ ರಾತ್ರಿ ಸ್ವಲ್ಪ ಜೋರು ಮಾಡಿ ಓದಲು ಹೇಳಿದಕ್ಕೆ. ನೊಂದುಕೊಂಡು ಆಕೆ ಗುರುವಾರ ಬೆಳಿಗ್ಗೆ ಮನೆಯ ಪಕ್ಕಾಸಿಗೆ ಚೂಡಿದಾರದ ಶಾಲಿನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.