ಕಾಸರಗೋಡು,ಆ 16 (Daijiworld News/MSP): ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಬಾವಿಯೊಂದರಲ್ಲಿ ಪತ್ತೆಯಾದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಮೇಲ್ಪರಂಬದಲ್ಲಿ ನಡೆದಿದೆ.
ಮೃತಪಟ್ಟವನನ್ನು ಮೇಲ್ಪರಂಬದ ನೌಫಾಲ್ (22) ಎಂದು ಗುರುತಿಸಲಾಗಿದೆ. ನೌಫಲ್ ಈದ್ ಹಬ್ಬದ ದಿನ ಅಂದರೆ ಆ. 12 ರ ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು.ನೌಫಲ್ ಗಾಗಿ ಮನೆಯವರು, ಸಂಬಂಧಿಕರು ಹುಡುಕಾಟ ನಡೆಸಿದ್ದರು.
ಎಲ್ಲೂ ಪತ್ತೆಯಾಗದ ಹಿನ್ನಲೆಯಲ್ಲಿ ಮನೆಯವರು ಬೇಕಲ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಈ ನಡುವೆ ಮನೆಯಿಂದ ಅಲ್ಪ ದೂರದ ಬಾವಿಯೊಂದರಲ್ಲಿ ನೌಫಲ್ ಮೃತದೇಹ ಪತ್ತೆಯಾಗಿದೆ. ನೌಫಲ್ ಹಣೆಯಲ್ಲಿ ಗಾಯದ ಗುರುತು ಪತ್ತೆಯಾಗಿದ್ದು , ಕೊಲೆಯೇ ಎಂಬ ಶಂಕೆ ಉಂಟಾಗಿದೆ. ನೌಫಾಲ್ ಕಾಸರಗೋಡು ನಗರದ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಬೇಕಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಕೈಗೆತ್ತಿಗೊಂಡಿದ್ದಾರೆ.