ಬೆಳ್ತಂಗಡಿ, ಆ 14 (Daijiworld News/SM): ಪ್ರಕೃತಿ ವಿಕೋಪದಿಂದ ನಾವೂರು ಗ್ರಾಮದ ಮಂಜೊಟ್ಟಿ ಎರ್ಮೆಲೆ ರಸ್ತೆ ಮಧ್ಯೆ ಪಾಂಚಾರು ಗುಡ್ಡೆ ಬಿರುಕು ಬಿಟ್ಟಿದ್ದು, ಈ ಭಾಗದ ಸಂಪರ್ಕ ರಸ್ತೆ ಸಂಪರ್ಕ ಕಡಿತದ ಭೀತಿಯನ್ನು ಎದುರಿಸುತ್ತಿದೆ.
ಸ್ಥಳೀಯರ ಪ್ರಕಾರ ಕಳೆದ ಕೆಲವು ವರ್ಷಗಳ ಹಿಂದೆಯೇ ಸಾಮಾನ್ಯವಾಗಿ ಮೂಡಿದ್ದ ಬಿರುಕು ಈ ಬಾರಿಯ ಮಳೆಗೆ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಇದನ್ನು ಇಲ್ಲಿನ ಸ್ಥಳೀಯ ಎರ್ಮಲೆ ನಿವಾಸಿಯೋರ್ವರು ಶುಕ್ರವಾರ ಗಮನಿಸಿದ್ದಾರೆ. ಒಂದೂವರೆ ಅಡಿ ಮೆಟ್ಟಿಲು ರೂಪದಲ್ಲಿ ಭೂ ಪ್ರದೇಶಾ ತಗ್ಗಿರುವುದು ಬೆಳಕಿಗೆ ಬಂದಿದೆ. ಮಂಜೆಟ್ಟಿ ಹಾಗೂ ಎರ್ಮಲೆ ಸಂಪರ್ಕಿಸುವ ರಸ್ತೆ ಇದಾಗಿದೆ.
ಈ ಭಾಗದಲ್ಲಿ 15 ಕುಟುಂಬಗಳಿದ್ದು ರಸ್ತೆ ಸಂಪರ್ಕ ಕಡಿತವಾದರೆ ಸಂಪರ್ಕ ಕಡಿತಗೊಂಡಲ್ಲಿ ಮಂಜೊಟ್ಟಿ-ಪುಳಿತ್ತಾಡಿಯಾಗಿ ಎರ್ಮಲೆ 10 ಕಿಲೋ ಮೀಟರ್ ಸುತ್ತಿ ಬರುವ ಜತೆಗೆ ಗುಡ್ಡವೇ ಕುಸಿದರೆ ಅಪಾರ ಹಾನಿಯಾಗುವ ಭೀತಿ ಎದುರಾಗಿದೆ ಎಂದು ಸ್ಥಳೀಯರಾದ ಜಯಂತ್ ನಾವೂರು ತಿಳಿಸಿದ್ದಾರೆ.
ಕಳೆದ ವಾರವಷ್ಟೆ ಮಳೆಗೆ ಸಮೀಪದ ಕೈಕಂಬ-ಪುಳಿತ್ತಡಿ ಭಜನಾ ಮಂದಿರ ತೆರಳುವ ಸೇತುವೆ ಕೊಚ್ಚಿ ಹೋಗಿದ್ದು ಇದರಿಂದ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಆತಂಕ ಒಂದೆಡೆಯಾದರೆ, ಇಲ್ಲಿನ 2 ಕಿ.ಮೀ.ಗುಡ್ಡದ ಮೇಲ್ಮೈ ಬಿರುಕು ಬಿಟ್ಟಿರುವುದರಿಂದ ಇನ್ನಷ್ಟು ಸಮಸ್ಯೆಯಾಗಬಹುದು ಎಂಬುದು ಜನರ ಆತಂಕವಾಗಿದೆ.