ಮಂಗಳೂರು, ಆ 14 (Daijiworld News/MSP): ನಗರದ ಪ್ರಖ್ಯಾತ ಬಿಲ್ಡರ್ ಸಂಸ್ಥೆ ಎನಿಸಿಕೊಂಡಿರುವ ನಿರ್ಮಾಣ್ ಬಿಲ್ಡರ್ಸ್ ಸಂಸ್ಥೆಯ ವತಿಯಿಂದ 73ನೇ ಸ್ವಾತಂತ್ಯ್ರೊತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಕಲರಿಂಗ್ ಮತ್ತು ಚದ್ಮವೇಷ ಸ್ಪರ್ಧೆಯನ್ನು ನಗರದ ಭಾರತ್ ಮಾಲ್ನಲ್ಲಿ ಇತ್ತೀಚಿಗೆ ಹಮ್ಮಿಕೊಳ್ಳಲಾಯಿತು. ಸುರಿಯುತ್ತಿರುವ ಅನಿರತ ಮಳೆ ಪ್ರವಾಹವನ್ನು ಲೆಕ್ಕಿಸದೆ ಬೆಳಿಗ್ಗಿನಿಂದಲೇ ಸುಮಾರು 600ಕ್ಕೂ ಹೆಚ್ಚು ಮಕ್ಕಳು ಹೆಸರನ್ನು ನೋಂದಾಯಿಸಿದ್ದರು. ನಿರ್ಮಾಪಕರಿಂದ ಮೊದಲು ಹೆಸರು ನೋಂದಾಯಿಸಿದ 400 ಮಕ್ಕಳಿಗೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪುಟಾಣಿಗಳಾದ ದ್ರಿತಿ ಎಸ್. ಪ್ರಥಮ ಬಹುಮಾನವನ್ನೂ, ಸಿಂಚನಾ ಕೊಟ್ಯಾನ್ ದ್ವಿತೀಯ ಬಹುಮಾನವನ್ನೂ ಹಾಗೂ ಶೀಯಾನ್ ತೃತೀಯ ಬಹುಮಾನವನ್ನು ಪಡೆದರು.
ಕಲರಿಂಗ್ ಸ್ಪರ್ಧೆಯಲ್ಲಿ ವೈಭವಿ ಅಳಕೆ ಪ್ರಥಮ ಬಹುಮಾನವನ್ನೂ, ಕಾರ್ತಿಕ್ ಎಸ್. ದ್ವಿತೀಯ ಬಹುಮಾನವನ್ನೂ ಹಾಗೂ ಭಾರ್ಗವಿ ಎಸ್. ಆಚಾರ್ಯ ತೃತೀಯ ಬಹುಮಾನವನ್ನು ಪಡೆದರು.
ಛದ್ಮವೇಷ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಪಟಾಣಿಗಳಾದ ರುತ್ವ ಎಚ್.ಪಿ. ಪ್ರಥಮ ಬಹುಮಾನವನ್ನೂ, ಸ್ನಿಥಿಕ್ ಎನ್. ದ್ವಿತೀಯ ಬಹುಮಾನವನ್ನೂ ಹಾಗೂ ಐಷಮಿ ಬಿ.ಎಮ್ ತೃತೀಯ ಬಹುಮಾನವನ್ನು ಪಡೆದರು.
ಚದ್ಮವೇಷ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ನಿಹಾರಿಕಾ ಬಿ.ಎಮ್ ಪ್ರಥಮ ಬಹುಮಾನವನ್ನೂ, ಮನಸ್ವಿ ಕಾಂಚನ್ ದ್ವಿತೀಯ ಬಹುಮಾನವನ್ನೂ ಹಾಗೂ ಚಿವ್ನೀಶ್ ಕೊಟ್ಟಾರಿ ತೃತೀಯ ಬಹುಮಾನವನ್ನು ಪಡೆದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ನಿರ್ಮಾಣ್ ಬಿಲ್ಡರ್ಸ್ ವತಿಯಿಂದ ತಲಾ 1 ಲಕ್ಷ ರೂಪಾಯಿಯ ಗಿಫ್ಟ್ ವೋಚರ್ (ಒಟ್ಟು 4ಕೋಟಿ ಮೊತ್ತದ) ನೀಡಲಾಯಿತು. ಈ ಗಿಫ್ಟ್ ವೋಚರ್ ಅನ್ನು ಗ್ರಾಹಕರು ಈಗಿರುವ ಎಲ್ಲಾ ಕೊಡುಗೆಗಳನ್ನು ಹೊರತುಪಡಿಸಿ, ಹೆಚ್ಚುವರಿಯಾಗಿ ತಮಗೆ ಬೇಕಾಗಿರುವ ನಿರ್ಮಾಣ್ ಬಿಲ್ಡರ್ಸ್ನ ಮನೆ ಅಥವಾ ವಾಣಿಜ್ಯ ಕಟ್ಟಡವನ್ನು ಖರೀದಿಸುವಾಗ ಬಳಕೆ ಮಾಡಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ನಿರ್ಮಾಣ್ ಹೋಮ್ಸ್ ವ್ಯವಸ್ಥಾಪಕ ಪಾಲುದಾರರಾದ ಕೃಷ್ಣರಾಜ್ ಸಾಲ್ಯಾನ್ ಮಾತನಾಡಿ ನಮ್ಮ ದೇಶಕ್ಕಾಗಿ ಬಲಿದಾನಗೈದ ವೀರ ಯೋಧರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಸವಿ ನೆನಪಿಗಾಗಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬೀಕರ ಮಳೆ ಪ್ರವಾಹವಾದ ಹೊರತಾಗಿಯೂ ಇಷ್ಟೊಂದು ಅಪೂರ್ವ ಪ್ರಮಾಣದಲ್ಲಿ ಮಕ್ಕಳ ಹೆಸರನ್ನು ನೋಂದಾಯಿಸಿ ಮಕ್ಕಳಿಗೆ ಪ್ರೋತ್ಸಾಹಿಸಿದ ಪೋಷಕರಿಗೆ ಅಭಿನಂದಿಸಿದರು.
ನಮ್ಮ ಪೂರ್ವಜರು ಕಂಡ ಅಖಂಡ ಭಾರತದ ಕನಸು ನನಸಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಇದು ವರೆಗೆ ದೇಶದ ೨೮ ರಾಜ್ಯಗಳಲ್ಲಿ ನಮ್ಮ ತ್ರಿರ್ವಣ ಧ್ವಜ ರಾರಾಜಿಸುತ್ತಿದ್ದು, ಈ ಬಾರಿ 72 ವರ್ಷಗಳಲ್ಲೇ ಮೊದಲ ಬಾರಿಗೆ 29 ರಾಜ್ಯಗಳಲ್ಲಿ ತ್ರಿರ್ವಣ ಧ್ವಜ ರಾರಾಜಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಪೇಪರ್ ಸೀಡ್ ಖ್ಯಾತಿಯ ನಿತಿನ್ ವಾಸ್ರವರು ಪೇಪರ್ನಲ್ಲಿ ಹೂವು ಮತ್ತು ಹಣ್ಣಿನ ಬೀಜದ ಮಿಶ್ರಣದೊಂದಿಗೆ ಭಾರತ ದೇಶದ ತ್ರಿವರ್ಣ ಧ್ವಜವನ್ನು ರಚಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿ, ಪರಿಸರ ಸ್ನೇಹಿ ಧ್ವಜವನ್ನು ಬಳಸುವ ಬಗ್ಗೆ ಮತ್ತು ಪ್ಲಾಸ್ಟಿಕ್ ಧ್ವಜ ನಿಷೇಧದ ಬಗ್ಗೆ ಅರಿವು ಮೂಡಿಸಿದರು.
ಮುದ್ರ ಡೇವಲಪರ್ಸ್ ಮಾಲಿಕರಾದ ಶ್ರೀ ಕೆ. ವಾಸುದೇವ್ ಭಟ್ ಮುಖ್ಯ ಅತಿಥಿಯಾಗಿದ್ದರು ಹಾಗೂ ನಿರ್ಮಾಣ್ ಬಿಲ್ಡರ್ಸ್ ಪಾಲುದಾರರಾದ ಕೃಷ್ಣರಾಜ್ ಮಾಯ್ಯ, ಸುಭಾಷ್ ನಾಯಕ್ ಉಪಸ್ಥಿತರಿದ್ದರು. ಮಂಗಳೂರಿನ ಡ್ರಿಮ್ ಕ್ಯಾಚರ್ಸ್ ಈವೆಂಟ್ ಸಂಸ್ಥೆ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂಧರ್ಭದಲ್ಲಿ ಕೃಷ್ಣರಾಜ್ ಸಾಲ್ಯಾನ್ರವರು ನಗರದ ಲಾಲ್ಬಾಗ್, ಮಂಗಳೂರು ಮಹಾನಗರ ಪಾಲಿಕೆಯ ಬಳಿ ಶೀಘ್ರದಲ್ಲೇ ತಲೆಯೆತ್ತಲಿರುವ ವಿಶಿಷ್ಟವಾದ ವಾಣಿಜ್ಯ ಸಂಕೀರ್ಣ ಪ್ರೈಡ್ ಸೆಂಟರ್ ಬಗ್ಗೆ ವಿವರಿಸಿದರು. ಪ್ರೈಡ್ ಸೆಂಟರ್ ಒಂದು ವಿಷಿಷ್ಟವಾದ ವಾಣಿಜ್ಯ ಸಂಕೀರ್ಣವಾಗಿದ್ದು ಇದು ಮಂಗಳೂರು ನಗರದಲ್ಲಿ ಕಾರ್ಪೋರೇಟ್ ಕಛೇರಿಗಳನ್ನು ಹೊಂದಲು ಸೂಕ್ತವಾದ ಕಟ್ಟಡವಾಗಿರುತ್ತದೆ. ಈ ವಾಣಿಜ್ಯ ಸಂಕೀರ್ಣವು 5 ಮಹಡಿ ಹಾಗೂ 27 ಕಛೇರಿಗಳನ್ನು ಹೊಂದಲಿದ್ದು, ಇಲ್ಲಿ ಕಾರ್ಪೋರೇಟ್ ವಿಸಿಟರ್ ಕಾರ್ ಪಾರ್ಕಿಂಗ್, ರಿಷೆಪ್ಶನ್ ಕೌಂಟರ್, ಸುಸಜ್ಜಿತವಾದ ಕಾನ್ಫರೆನ್ಸ್ ಹಾಲ್, ಪಾಂಟ್ರೀ, ಲಿಫ್ಟ್, ವೈ-ಫೈ, ಇಂಟರ್ಕಾಮ್ ಸೌಲಭ್ಯ, ಸಿಸಿ ಟಿವಿ ಕ್ಯಾಮೆರಾ, ಫಯರ್ ಫೈಟಿಂಗ್ ಸಿಸ್ಟಮ್, ಸೋಲಾರ್ ಲೈಟಿಂಗ್ ಮುಂತಾದ ವ್ಯವಸ್ಥೆಗಳನ್ನು ಹೊಂದಲಿದೆ. ಈ ವಾಣಿಜ್ಯ ಸಂಕೀರ್ಣದಲ್ಲಿ 300 ಚ.ಅಡಿಗಳಿಂದ ೬೦೦೦ ಚ.ಅಡಿಗಳವರೆಗಿನ ವಿವಿಧ ರೀತಿಯ ಆಫೀಸ್ ಸ್ಪೇಸ್ಗಳು ಲಭ್ಯವಿದ್ದು ಇಂಜಿನೀರ್ಸ್, ಡಾಕ್ಟರ್ಸ್, ಚಾರ್ಟರ್ಡ್ ಎಕೌಟಂಟ್ಸ್, ಎಡ್ವಕೇಟ್ಸ್ ಹಾಗೂ ಇನ್ನಿತರ ವೃತ್ತಿಪರರಿಗೆ ಆಫೀಸ್ ಹೊಂದಲು ಸೂಕ್ತವಾದ ಕಟ್ಟಡವಾಗಿರುತ್ತದೆ. ಗ್ರಾಹಕರು ಪ್ರೈಡ್ ಸೆಂಟರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಗರದ ಬಿಜೈ-ಕಾಪಿಕಾಡ್ ರಸ್ತೆಯ, ಸುಪ್ರಭಾತ್ ಬ್ಯುಲ್ಡಿಂಗ್ನಲ್ಲಿರುವ ನಿರ್ಮಾಣ್ ಬಿಲ್ಡರ್ಸ್ ಸಂಸ್ಥೆಯನ್ನು ಸಂಪರ್ಕಿಸಬಹುದು ಅಥವಾ ಲಾಗ್ ಆನ್ ಮಾಡಿ: http://www.nirmaanhousing.com