ಬೆಂಗಳೂರು ಡಿ 20 : ವಾಹನಗಳ ಹೊರ ಕವಚದ ಸುರಕ್ಷೆಗಾಗಿ ಅಳವಡಿಕೆ ಮಾಡುವ ಕ್ರ್ಯಾಶ್ ಗಾರ್ಡ್ ಹಾಗೂ ಬುಲ್ ಬಾರ್ ನ್ನು ನಿಷೇಧ ಮಾಡುವಂತೆ ಕೇಂದ್ರದ ರಸ್ತೆ ಸಾರಿಗೆ ಇಲಾಖೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ವಾಹನಗಳ ಸುರಕ್ಷತೆಗಾಗಿ ಆಳವಡಿಸುವ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ ತಾಗಿಯೇ ಅಪಘಾತದ ಸಂದರ್ಭದಲ್ಲಿ ಹಲವರು ಮೃತಪಟ್ಟಿದ್ದಾರೆ ಹೀಗಾಗಿ ಇವುಗಳನ್ನು ಅಳವಡಿಸುವುದನ್ನು ನಿಷೇಧಿಸಬೇಕೆಂದು ಕೇಂದ್ರ ರಸ್ತೆ ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಅಪಘಾತಗಳು ಸಂಭವಿಸಿದಾಗ ವಾಹನಗಳಿಗೆ ಹೆಚ್ಚಿನ ಹಾನಿಯಾಗಬಾರದೆಂಬ ಕಾರಣಕ್ಕೆ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ ಅಳವಡಿಸುತ್ತಿದ್ದಾರೆ. ‘ಮೋಟಾರ್ ವಾಹನಗಳ ಕಾಯ್ದೆ 1988ರ ಸೆಕ್ಷನ್ 52ರ ಪ್ರಕಾರ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ ಗಳನ್ನು ನಿಷೇಧಿಸಬೇಕು, ಈ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಸೆಕ್ಷನ್ 190 ಹಾಗೂ 191 ಅಡಿ ಕ್ರಮ ಜರುಗಿಸಿ ದಂಡ ವಿಧಿಸಬೇಕು’ ಎಂದು ಸಚಿವಾಲಯದ ನಿರ್ದೇಶಕರಾದ ಪ್ರಿಯಾಂಕಾ ಭಾರತಿ ಸಹಿ ಮಾಡಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ. ಹೀಗಾಗಿ ವಾಹನಕ್ಕೆ ಕ್ರ್ಯಾಶ್ ಗಾರ್ಡ್ ಹಾಗೂ ಬುಲ್ ಬಾರ್ ಆಳವಡಿಕೆ ಮಾಡಲು ಇಚ್ಚಿಸುವವರು ಸ್ವಲ್ಪ ಯೋಚಿಸೋದು ಒಳಿತು.