ಮಂಗಳೂರು, ಆ 13 (Daijiworld News/MSP): ಸೌರಮಾನ ಪದ್ಧತಿಯ ನಾಲ್ಕನೇ ಮಾಸ ಆಟಿ ತಿಂಗಳು. ಶುಭ ಕಾರ್ಯಗಳು ಆಟಿ ಮಾಸದ ವೈರಿಗಳು ಎಂದು ಆಡು ಮಾತಿನಲ್ಲಿ ಹೇಳಿಕೆ ಇದೆ. ಹೆಚ್ಚಿನ ರೋಗರುಜಿನಗಳು ಬಾಧಿಸುವ ತಿಂಗಳು ಇದೆಂದು ತುಳುಜನರ ನಂಬಿಕೆ. ಹೀಗಾಗಿ ಊರಿನ ಮಾರಿ ಹಾಗೂ ರೋಗ ರುಜಿನಗಳನ್ನು ಓಡಿಸುಲು ಆಟಿ ಕಳೆಂಜ ಬರುತ್ತಾನೆ ಎನ್ನುವ ನಂಬಿಕೆ ತುಳುನಾಡಿನ ಜನರದ್ದು.
ಇನ್ನು ಆಟಿ ತಿಂಗಳಲ್ಲಿ ದೈವಗಳ ನೇಮ ನಡೆಯುವುದು ಅಪರೂಪ. ಆದರೆ ಬಂಟ್ವಾಳದ ಪೆರುವಾಯಿ ಗುತ್ತಿನಲ್ಲಿ ಅಪರೂಪದಲ್ಲಿ ಅಪರೂಪವೆಂಬಂತೆ ಆಟಿಯಲ್ಲಿ ನೇಮೋತ್ಸವ ಜರಗುತ್ತದೆ.
ಈ ಮೆಚ್ಚಿ ಜಾತ್ರೆ ನೋಡಲೆಂದೇ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುತ್ತಾರೆ. ಈ ಭಾರಿಯೂ ಆ. 11ರ ಭಾನುವಾರ ಪಂಜುರ್ಲಿ ಮತ್ತು ದೂಮಾವತಿ ದೈವಗಳ ನೇಮೋತ್ಸವ ಮೆಚ್ಚಿ ಜಾತ್ರೆ ನಡೆಯಿತು.