ಮಂಗಳೂರು ಡಿ 20 : ಕನ್ನಡದ ಖ್ಯಾತ ಬರಹಗಾರ ಡಾ. ಗಿರಡ್ದಿ ಗೋವಿಂದ ರಾಜ, ಕೊಂಕಣಿ ಸಾಹಿತಿ ಎಡಿನೆತ್ಟೋ ಜೆಪ್ಪು, ಹಿರಿಯ ಪತ್ರಕರ್ತ ಎನ್.ಗುರುರಾಜ್ ಒಳಗೊಂಡಂತೆ ಏಳು ವ್ಯಕ್ತಿಗಳಿಗೆ ಸಂದೇಶ ಪ್ರಶಸ್ತಿಯನ್ನು ಜನವರಿ 13 ರಂದು ಪ್ರಧಾನ ಮಾಡಲಾಗುತ್ತದೆ ಎಂದು ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾದ ಬರಹಗಾರ ಮತ್ತು ಕಾದಂಬರಿಕಾರ ನಾ ಡಿಸೋಜ ಡಿಸೆಂಬರ್ 20 ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸತತ 27 ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವ ಸಂಸ್ಥೆ ಈ ಬಾರಿ ಸಂದೇಶ ಕಲಾ ಪ್ರಶಸ್ತಿಯನ್ನು ಅಶೋಕ್ ಗುಡಿಗಾರ್, ಸಂದೇಶ್ ಅಧ್ಯಾಪಕ ಪ್ರಶಸ್ತಿಯನ್ನು ಕೆ. ಗಾದಿಲಿಂಗಪ್ಪ ಅವರಿಗೆ, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ ವಿಲ್ಸನ್ ಒಲಿವೆರ , ಸಂದೇಶ ವಿಶೇಷ ಸಾಧಕ ಪ್ರಶಸ್ತಿ ಟಿ.ರಾಜ (ಆಟೋ ರಾಜಾ) ಗೆ ನೀಡಲಾಗುವುದು ಎಂದರು.
ಸಂದೇಶವು ಸಾಹಿತ್ಯ, ಕಲೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಜನರಿಗೆ ರಾಜ್ಯ ಮಟ್ಟ ಸಂದೇಶ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬಂದಿದೆ. ಇಲ್ಲಿಯವರೆಗೆ, 244 ವ್ಯಕ್ತಿಗಳಿಗೆ ಪ್ರಶಸ್ತಿಗಳನ್ನು ನೀಡಿಲಾಗಿದ್ದು ಈ ಸಾರಿಯೂ ಜನವರಿ 13 ರಂದು ಏಳು ಜನರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಸಂದೇಶ್ ಸ್ಥಾಪಕ ನಿರ್ದೇಶಕ ವಿಕ್ಟರ್ ವಿಜಯ್ ಲೋಬೋ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಡಾ ನಾ ದಾಮೋದರ ಶೆಟ್ಟಿ, ಚಂದ್ರಕಲಾ ನಂದಾವರ, ರೋಯ್ ಕ್ಯಾಸ್ತಲಿನೊ, ಟೈಟಸ್ ನೊರೋನ್ಹಾ, ವಿಕ್ಟರ್ ಕ್ರಾಸ್ತಾ ಮುಂತಾದವರು ಉಪಸ್ಥಿತರಿದ್ದರು.