ಬೆಳ್ತಂಗಡಿ, ಆ 12 (Daijiworld News/MSP): ಕಳೆದೊಂದು ವಾರದಿಂದ ಭಾರೀ ಮಳೆಗೆ ಗುಡ್ಡ ಕುಸಿತಕ್ಕೊಳಗಾಗಿ ಸಂಚಾರಕ್ಕೆ ಆಡಚಣೆಯಾಗಿ ಬಂದ್ ಮಾಡಲಾಗಿದ್ದ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ (ಹಾಸನ–ಮಂಗಳೂರು) ರಸ್ತೆಯಲ್ಲಿ ಹಗಲು ಹೊತ್ತು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಭಾನುವಾರದಂದು ಮಳೆ ತನ್ನ ಆರ್ಭಟವನ್ನು ಕೊಂಚ ಕಡಿಮೆ ಮಾಡಿದ್ದರಿಂದ ಅಂದೇ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಆದರೆ ವಾಹನ ಚಾಲಕರು ಆತಂಕದಿಂದಲೇ ಘಾಟ್ ನಲ್ಲಿ ವಾಹನ ಚಾಲನೆ ಮಾಡಿದ್ರು. ಬೆಳಗ್ಗೆ ಹತ್ತರಿಂದ ಸಂಜೆ ಆರರವರೆಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು ಆ ಬಳಿಕ ಸಂಜೆಯಾಗುತ್ತಲೇ ಸೋಮವಾರವೂ ವಾಹನ ಸಂಚಾರ ನಿರ್ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ವೇಳೆ ಗುಡ್ಡ ಕುಸಿತದ ಭೀತಿಯಿರುವ ಕಾರಣದಿಂದ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.