ಉಡುಪಿ,ಆ10 (Daijiworld News/RD): ಬ್ರಾಹ್ಮಣ ಸಮಿತಿ ಕರಂಬಳ್ಳಿಯ ಸದಸ್ಯರು , ಅತಿವೃಷ್ಟಿ ನಿವಾರಣೆಗೆ ಮಾಡುವಂತೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ದೇವರಿಗೆ ವಿಶೇಷವಾಗಿ ಲಕ್ಷ ತುಳಸಿ ಅರ್ಚನೆ ಯನ್ನ ಶನಿವಾರ ಆಗಸ್ಟ್ 10 ರಂದು ಸಲ್ಲಿಸಲಾಯಿತು.
ಈ ವರ್ಷ ಬಹಳ ತಡವಾಗಿ ಮಳೆ ಆರಂಭವಾದರೂ ಕೂಡ ಪ್ರಕೃತಿ ಜನರ ವಿರುದ್ಧವಾಗಿ ತಿರುಗಿ ನಿಂತಿದೆ ಎಂಬಷ್ಟರ ಮಟ್ಟಿಗೆ ಮಳೆ ಸುರಿಯುತ್ತಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಹರಿಯುತ್ತಿರುವ ಮಳೆಯಿಂದಾಗಿ ಹಲವಾರು ಜೀವ ಹಾನಿ ಯಾಗಿದೆ, ಆಸ್ತಿ ಹಾನಿಯಾಗುತ್ತಿದೆ. ಎಲ್ಲ ಜೀವ ಜಲ ನದಿ ಹಳ್ಳ ಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪ್ರವಾಹ ಪೀಡಿತ ಪ್ರದೇಶಗಳಿರುವ ಜಿಲ್ಲೆಯಲ್ಲಿ ಯಾವುದೇ ಅಪಾಯ ಸಂಭವಿಸಿದಂತೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತದೆ.
ಈ ಅತಿವೃಷ್ಟಿಯನ್ನು ಯಾರು ತಡೆಯುವ ಸ್ಥಿತಿಯಲ್ಲಿ ಇಲ್ಲ. ಜನರು ಪ್ರಕೃತಿಯ ನಾಶ ಮಾಡುತ್ತಿರುವ ಫಲಿತಾಂಶ ಇದೀಗ ಕರಾವಳಿಯು ಸೇರಿದಂತೆ ಮಳೆಯಿಂದಾಗಿ ಕಡಲಬ್ಬರವು ಹೆಚ್ಚಾಗುತ್ತಿದೆ. ಅಪಾಯದ ಸೀಮೆಯಲ್ಲಿರುವ ಜನರನ್ನು ಜಿಲ್ಲಾಡಾಳಿತ, ರಕ್ಷಣಾ ತಂಡ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡುತ್ತಿದೆ. ಆದರೂ ಮುಂದೆ ಅನಾಹುತ ವಾಗದಂತೆ ವರುಣ ಶಾಂತನಾಗಲು ಅತಿವೃಷ್ಟಿ ಯನ್ನು ನಿವಾರಣೆಗೆ ಮಾಡುವಂತೆ ಬ್ರಾಹ್ಮಣ ಸಮಿತಿ ಕರಂಬಳ್ಳಿಯ ಭಕ್ತ ಸದಸ್ಯರು, ಅಲ್ಲಿಯ ಶ್ರೀ ವೆಂಕಟರಮಣ ದೇವಸ್ಥಾನದ ಕೃಷ್ಣ ದೇವರಿಗೆ ಶನಿವಾರ ಸೇರಿ ಭಕ್ತಿಯಿಂದ ಮೊರೆ ಇಟ್ಟರು. ಅಲ್ಲದೆ ಈ ವಿಶೇಷ ಸಂದರ್ಭದಲ್ಲಿ ಲಕ್ಷ ತುಳಸಿ ಅರ್ಚನೆ ಮಾಡಲಾಯಿತು.