ಮಂಗಳೂರು, ಆ.10 (Daijiworld News/RD): ಕರಾವಳಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಇದೀಗ ತೊಕ್ಕೊಟ್ಟು ಫ್ಲೈಓವರ್ನ ಒಂದು ಭಾಗವು ಬಿರುಕು ಬಿಟ್ಟಿದೆ. ಇದರಿಂದಾಗಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಫ್ಲೈಓವರ್ ನ ಮೇಲೆ ಚಲಿಸದಂತೆ ನೋಡಿಕೊಳ್ಳಲು ಪೊಲೀಸರು ಆ ಸ್ಥಳದಲ್ಲಿ ಬ್ಯಾರಿಕೇಡ್ಗಳ ಮೂಲಕ ಸುತ್ತುವರಿದಿದ್ದಾರೆ.
ಫ್ಲೈಓವರ್ನ ಒಂದು ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಪೊಲೀಸರು ಈಗಾಗಲೇ ಖಚಿತಪಡಿಸಿದ್ದಾರೆ. ಹಾಗಾಗಿ ಸ್ಥಳದಲ್ಲೇ ವಾಹನ ಸಂಚಾರ ನಿಯಂತ್ರಿಸಲು ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಬಿರುಕುಗೊಂಡ ಭಾಗವನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ತೊಕ್ಕೊಟ್ಟು ಫ್ಲೈಓವರ್ನಲ್ಲಿ ಈವರೆಗೆ ಯಾವುದೇ ರೀತಿಯ ಅಭಿವೃದ್ಧಿ ಕ್ರಮ ಕೈಗೊಂಡದೇ ಇರುವ ಪರಿಣಾಮವಾಗಿ, ಈ ರೀತಿಯ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಫ್ಲೈಓವರ್ವು ಬಿರುಕು ಬಿಟ್ಟಿದೆ ಎಂಬ ಸುದ್ದಿ ಶುಕ್ರವಾರ ಮಧ್ಯಾಹ್ನ ಹರಡಿಕೊಂಡಿದ್ದು, ಈ ಸುದ್ದಿಯಿಂದ ಆತಂಕಗೊಂಡ ಅನೇಕ ಜನರು, ಈ ಸುದ್ದಿಯನ್ನು ಖಚಿತಪಡಿಸುವ ಸಲುವಾಗಿ ತೊಕ್ಕೊಟ್ಟುಗೆ ಧಾವಿಸಿದ್ದರು. ಆದರೆ ಈ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಇಂದು ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಬಿರುಕು ಕಾಣಿಸಿಕೊಂಡಿದೆ ಸ್ಪಷ್ಟಪಡಿಸಿದ್ದಾರೆ. ವಾಹನ ಚಾಲಕರು ಈ ಪ್ರದೇಶದಲ್ಲಿ ಸಂಚರಿಸುವಾಗ ರಸ್ತೆ ಕಂಪನವಾಗುತ್ತಿದೆ ಎಂದು ಹೇಳುತ್ತಿದ್ದರು. ಹೀಗಾಗಿ ಇಂದು ಪೊಲೀಸರಿಂದ ಆ ಭಾಗವನ್ನು ಬ್ಯಾರಿಕೇಡ್ಗಳಿಂದ ಆ ಭಾಗವನ್ನು ಸುತ್ತುವರಿಯುವ ಮೂಲಕ ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ.