ಮಂಗಳೂರು, ಆ 09 (Daijiworld News/MSP): ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಡಾ. ಹರ್ಷ ಪಿ.ಎಸ್.ಅವರು ಆ. 09 ರ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯ ಜನರ ಬಗ್ಗೆ ಹೆಮ್ಮೆ ಇದೆ. ಕಾನೂನಿಗೆ ಗೌರವ ನೀಡುವಂಥವರು. ಅಧಿಕಾರವನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿ ತರಲು ಪ್ರಯತ್ನಿಸುತ್ತೇನೆ ಎಂದರು.
2004ರ ಐಪಿಎಸ್ ಬ್ಯಾಚ್ನವರಾಗಿರುವ ಡಾ. ಹರ್ಷ ಪಿ.ಎಸ್. ಅವರು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ನಿರ್ದೇಶಕರಾಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಯುಕ್ತರಾಗಿ, ಕಾರಾಗೃಹ ಇಲಾಖೆ ಡಿಐಜಿ, ಕೆಎಸ್ಸಾರ್ಟಿಸಿಯ ನಿರ್ದೇಶಕ(ವಿಜಿಲೆನ್ಸ್ ಮತ್ತು ಸೆಕ್ಯೂರಿಟಿ) ಮುಂತಾದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.