ಮಂಗಳೂರು,ಸೆ.13: ಇತ್ತೀಚಿಗೆ ಮಂಗಳೂರು ಮೇಯರ್ ನೇತೃತ್ವದಲ್ಲಿ ಮಂಗಳೂರಿನ ಕೆಲವು ಅಕ್ರಮ ಮಸಾಜ್ ಪಾರ್ಲರ್ ಗಳಿಗೆ ದಾಳಿ ನಡೆಸಲಾಗಿತ್ತು. ಇದರ ವಿರುದ್ದ ಪಾರ್ಲರ್ ಮಾಲಕಿ ಏಕಾಏಕಿ ದಾಳಿ ಮತ್ತು ಬೀಗ ಹಾಕಿರುವುದನ್ನು ಖಂಡಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮೇಯರ್ ಹಾಗೂ ಪಾಲಿಕೆಯ ಆಯುಕ್ತರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸು ಹೊರಡಿಸಿತ್ತು. ಅದರಂತೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಆಯುಕ್ತರು ಖುದ್ದಾಗಿ ವಿಚಾರಣೆಗೆ ಹಾಜರಾಗಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ದಾಳಿಗೂ ಮುನ್ನ ಕಾನೂನು ನಿಯಮ ಪಾಲಿಸಬೇಕು ಎಂದು ಸೂಚನೆ ಹೊರಡಿಸಿದೆ.