ಬೆಳ್ತಂಗಡಿ, ಆ 08 (DaijiworldNews/SM): ಭಾರೀ ಮಳೆಯ ನಡುವೆಯೂ ಮರಳುಗಾರಿಕೆಗೆ ತೆರಳಿದ್ದ ಯುವಕನೋರ್ವ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕೊಕ್ಕಡ ಸಮೀಪದ ಸುದೆಗಂಡಿ ಎಂಬಲ್ಲಿ ನಡೆದಿದೆ. ಕೊಕ್ಕಡದ ನಿವಾಸಿ ವಿಶ್ವನಾಥ ಎಂಬವರ ಮಗ ಭವಿತ್ (23) ಮೃತ ಯುವಕನಾಗಿದ್ದಾನೆ.
ಕೊಕ್ಕಡದ ಸಮೀಪದ ಸುದೆಗಂಡಿ ಎಂಬಲ್ಲಿ ಕಪಿಲಾ ನದಿಯಲ್ಲಿ ಮರಳು ತೆಗೆಯಲೆಂದು ಇಳಿದ ಯುವಕ ಪ್ರವಾಹದ ನೀರಿನ ಸೆಳೆತಕ್ಕೊಳಗಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ನದಿಯಲ್ಲಿ ನೆರೆ ನೀರು ಪ್ರವಾಹ ಅಧಿಕವಾಗಿದ್ದರೂ ಅದನ್ನು ಲೆಕ್ಕಿಸದೆ ಸ್ಥಳೀಯ ತಂಡವೊಂದು ಅಕ್ರಮ ಮರಳುಗಾರಿಕೆ ನಡೆಸುತ್ತಿತ್ತು ಎನ್ನಲಾಗಿದೆ. ಈ ವೇಳೆ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.