ಕಾಸರಗೋಡು,ಆ. 08 (Daijiworld News/RD): ಸತತವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಜಿಲ್ಲೆ ತತ್ತರಗೊಂಡಿದೆ . ಗಾಳಿ ಮಳೆಗೆ ಜಿಲ್ಲೆಯ ಹಲವೆಡೆ ಅಪಾರ ನಾಶ ನಷ್ಟ ಉಂಟಾಗಿದೆ.
ಕಳೆದ 28 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 24 ಮನೆ ಭಾಗಶಃ ಮತ್ತು ಒಂದು ಮನೆ ಸಂಪೂರ್ಣ ನೆಲಕಚ್ಚಿದೆ. ವೆಳ್ಳರಿಕುಂಡು ತಾಲೂಕಿನಲ್ಲಿ ಮೂರು, ಕಾಸರಗೋಡು ಎರಡು, ಮಂಜೇಶ್ವರ ಏಳು, ಹೊಸದುರ್ಗ ತಾಲೂಕಿನಲ್ಲಿ 13 ಮನೆಗಳಿಗೆ ಹಾನಿ ಉಂಟಾಗಿದೆ. ಹೊಸದುರ್ಗ ತಾಲೂಕಿನಲ್ಲಿ ಒಂದು ಮನೆ ಸಂಪೂರ್ಣ ಕುಸಿದಿದೆ . ಹಲವೆಡೆ ವಿದ್ಯುತ್ ವ್ಯತ್ಯಯ ಗೊಂಡಿದೆ. ಉಪ್ಪಳದಲ್ಲಿ ಮರಗಳು ಉರುಳಿ ಬಿದ್ದ ಹಿನ್ನಲೆಯಲ್ಲಿ ಹದಿನೈದಕ್ಕೂ ಅಧಿಕ ಕಂಬಗಳು ಧರಾಶಾಹಿಯಾಗಿದೆ . ಜಿಲ್ಲೆಯ ಇತರ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ಥಗೊಂಡಿದೆ. ಹೊಸದುರ್ಗ, ವೆಳ್ಳರಿಕುಂಡು ತಾಲೂಕಿನ ಹಲವೆಡೆ ಕೃತಕ ನೆರೆ ಹಾವಳಿ ಉಂಟಾಗಿದೆ
ಹಲವೆಡೆ ಪ್ರವಾಹ ಸ್ಥಿತಿ ಉಂಟಾಗಿದೆ . ಮಳೆ ಗಿಂತ ಗಾಳಿಯ ಅಬ್ಬರ ಹೆಚ್ಚಾಗಿರುವುದು ಹಲವೆಡೆ ಕೃಷಿ ನಾಶ ಉಂಟಾಗಿದೆ. ಉಪ್ಪಳ ತೀರದಲ್ಲಿ ಕಡಲ್ಕೊರೆತದ ಅಬ್ಬರ ಹೆಚ್ಚಾಗಿದ್ದು, ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ . ಚೇರಂಗೈ ಸಿರಾಜ್ ನಗರದಲ್ಲಿ ಕಡಲ್ಕೊರೆತದಿಂದ ನಾಲ್ಕು ಕುಟುಂಬಗಳನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಆಗಸ್ಟ್ 9 ಮತ್ತು ಹತ್ತರಂದು ಕಾಸರಗೋಡು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ .