ಮಂಗಳೂರು, ಆ 08 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಅಬ್ಬರದ ಮಳೆ ಮುಂದುವರೆದಿದ್ದು, ಕುಮಾರಧಾರಾ ಮತ್ತು ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ.
ಸುಳ್ಯ ತಾಲೂಕಿನಾದ್ಯಾಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ತಾಲೂಕಿನ ಕಂದಲಡ್ಕ,ಮಿತ್ತೂರು, ಪಂಜ, ಅರಂಬೂರು, ಪೆರೋಡಿ ಮುಂತಾದ ಊರುಗಳು ನೆರೆ ಪೀಡಿತವಾಗಿದೆ.
ಸುಳ್ಯ ಕಲ್ಮಕಾರಿನಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದ್ದು, 8 ಕುಟುಂಬದ 25 ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಡಬದ ಅಂಬೇಡ್ಕರ್ ಭವನದಲ್ಲೂ ಗಂಜಿ ಕೇಂದ್ರ ಆರಂಭಿಸಲಾಗಿದ್ದು, ಸುಬ್ರಹ್ಮಣ್ಯದ ಆರು ಕುಟುಂಬದ 18 ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಬಂಟ್ವಾಳದ ಪಾಣೆಮಂಗಳೂರು ಶ್ರೀ ಶಾರದ ಹೈಸ್ಕೂಲ್ ನಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು ಸನ್ನದ್ದ ಸ್ಥಿತಿಯಲ್ಲಿ ಇರಿಸಲಾಗಿದೆ.
ಪಾಕೃತಿಕ ವಿಕೋಪ ಸಂಭವಿಸಿದರೆ ತಕ್ಷಣ ಹೋಗಿ ಪರಿಹಾರ ಕಾರ್ಯ ನಡೆಸಲು ಮಂಗಳೂರು ಹಾಗೂ ಸುಬ್ರಹ್ಮಣ್ಯದಲ್ಲಿ ಎನ್.ಡಿ.ಆರ್ .ಎಫ್ ನಿಯೋಜನೆ ಮಾಡಲಾಗಿದೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.