ಮಂಗಳೂರು, ಡಿ 19 : ಎರಡು ದಿನಗಳ ಕಾಲ ಪಿಲಿಕುಲ ನಿಸರ್ಗಧಾಮದಲ್ಲಿ ನಡೆಯಲಿರುವ ತುಳುನಾಡೋಚ್ಚಯ -2017 ಕಾರ್ಯಕ್ರಮಕ್ಕೆ ಇದೇ ಡಿಸೆಂಬರ್ 23 ರಂದು ಚಾಲನೆ ಸಿಗಲಿದೆ ಎಂದು ಕಾರ್ಯಕ್ರಮದ ಸಂಘಟನಾ ಸಮಿತಿಯ ಅಧ್ಯಕ್ಷ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ತಿಳಿಸಿದ್ದಾರೆ. ಈ ಬಗ್ಗೆ ಡಿಸೆಂಬರ್ 19 ರಂದು ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಚಿಂತಕರು , ಲೇಖಕರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಅಲ್ಲದೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಉದ್ಘಾಟನೆಯ ಮುಂಚಿತವಾಗಿ ವಾಮಂಜೂರಿನಿಂದ ಪಿಲಿಕುಲದವರೆಗೆ ಬೃಹತ್ ಸಾಂಸ್ಕೃತಿಕ ಮೆರವಣಿಗೆ ಇರಲಿದೆ.
ಇದೇ ವೇಳೆ ತುಳು ರತ್ನ ಪ್ರಶಸ್ತಿಯನ್ನು ಹಿರಿಯ ಕಾದಂಬರಿಕಾರ ಡಾ.ಡಿ.ಕೆ ಚೌಟಾ, ಹಿರಿಯ ಬರಹಗಾರ್ತಿ ಡಾ. ಸುನಿತಾ ಎಂ. ಶೆಟ್ಟಿ, ಕಲಾವಿದ ಗೋಪಾಲ್ ನಾಯಕ್ ಮಚಾರ್ ಅವರಿಗೆ ನೀಡಲಾಗುವುದು ಅಲ್ಲದೆ ಜನ ಮೈತ್ರಿ ಪ್ರಶಸ್ತಿಗಾಗಿ ಎಸ್.ಡಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಡಾ ಎಂ.ಎನ್ ರಾಜೇಂದ್ರಕುಮಾರ್, ಎ.ಜೆ.ಶೆಟ್ಟಿ, ಮಾರ್ಟಿನ್ ಅರಾನ್ಹಾ , ಸುಧೀರ್ ಕುಮಾರ್ ಶೆಟ್ಟಿ, ಮುರಲೀಧರ್ ಕಾಮತ್ , ಯು ಎ ಇ ಜಪ್ರ್ಹುಲ್ಲಾ ಖಾನ್ ಅವರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು. ಜೀವಮಾನ ಸಾಧಾನಾ ಪ್ರಶಸ್ತಿಗಾಗಿ, ನಿರ್ಮಾಪಕರಾದ ಡಾ. ರಿಚರ್ಡ್ ಕೇಸ್ಟಲಿನೋ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಡಿ 23 ಹಾಗೂ 24 ರಂದು ನಡೆಯುವ ಈ ಕಾರ್ಯಕ್ರಮವನ್ನು ಕರಾವಳಿಯಲ್ಲಿ ಭಾವೈಕ್ಯತೆ ಹಾಗೂ ತುಳು ಭಾಷೆ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಘಟನಾ ಸಮಿತಿಯ, ಸಂಚಾಲಕ ರಾಜೇಶ್ ಆಳ್ವಾ, ಕಾರ್ಯದರ್ಶಿ ಶಮೀನಾ ಆಳ್ವಾ, ಸದಸ್ಯರಾದ ಸರ್ವೋತ್ತಮ ಶೆಟ್ಟಿ, ಯೋಗೇಶ್ ಶೆಟ್ಟಿ ಸುಕುಮಾರ್ ಮೋಹನ್, ವಿ ಜಿ ಪಾಲ್ ಮತ್ತಿತರರು ಉಪಸ್ಥಿತರಿದ್ದರು.