ಮಂಗಳೂರು,ಆ. 08 (Daijiworld News/RD): ಕಳೆದೆರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಬೋಳಾರ ಎಮ್ಮೆಕೆರೆ ರಸ್ತೆಯ ಮಾರಿಗುಡಿ ಬಳಿಯ ಮನೆ ಮೇಲೆ ಬೃಹತ್ ಹುಳಿ ಮರ ಹಾಗೂ ತೆಂಗಿನ ಮರ ಬಿದ್ದು ಅಪಾರ ಹಾನಿ ಉಂಟಾಗಿದೆ.
ಅಶೋಕ್ ಶೆಟ್ಟಿಯವರ ಮನೆ ಇದಾಗಿದ್ದು, ಸಮಾರು ಎರಡು ಲಕ್ಷ ರೊಪಾಯಿಯಷ್ಟು ನಷ್ಟ ಈ ಘಟನೆಯಿಂದ ಸಂಭವಿಸಿದೆ. ಈಗಾಗಲೆ ಸ್ಥಳಕ್ಕೆ ಅಗ್ನಿ ಶಾಮಕದಳದವರು ಆಗಮಿಸಿದ್ದು, ಮರವನ್ನು ತೆರವುಗೊಳಿಸುವ ಕಾಯಾಚರಣೆ ನಡೆಸುತ್ತಿದ್ದಾರೆ.
ಜೊತೆಗೆ ನಿನ್ನೆ ರಾತ್ರಿಯು ಕೂಡ ಭಾರೀ ಮಳೆ ಸುರಿದ ಪರಿಣಾಮವಾಗಿ ಬೋಳಾರ ಮಾರಿಗುಡಿಯಿಂದ ಮಂಗಳಾದೇವಿಗೆ ಸಾಗುವ ರಸ್ತೆಯಲ್ಲಿ ಬುಗರಿ ಮರವೊಂದು ರಸ್ತೆಗೆ ಬಿದ್ದು ಸಂಚಾರವು ಅಸ್ತವ್ಯಸ್ತಗೊಂಡಿದೆ. ಈಗಾಗಲೆ ತೆರವು ಕಾರ್ಯಚರಣೆಯಾಗುತ್ತಿದೆ.ನಂತೂರು ಬಳಿಯ ಬಾರೇಬೈಲಿನಲ್ಲಿ ಗಾಳಿ ಮಳೆಯ ರಭಸಕ್ಕೆ ಮನೆ ಕುಸಿದಿದ್ದು, ಇದರಿಂದ ಅಪಾರ ನಷ್ಟ ಸಂಭವಿಸಿದ್ದು, ಈ ಬಗ್ಗೆ ವರದಿಯಾಗಿದೆ.
ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ವರುಣನ ಆರ್ಭಟ ಜೋರಾಗಿದ್ದು, ಇಂದು ಕೂಡ ನಿರಂತರವಾಗಿ ಗಾಳಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ಹವಾಮಾನ ವೈಪರಿತ್ಯ ಆಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.