ಮಂಗಳೂರು, ಆ 07 (DaijiworldNews/SM): ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ದುರಂತ ಘಟನೆ ಮಂಗಳೂರಿನ ಕುಳಾಯಿಯಲ್ಲಿ ನಡೆದಿದೆ. ಶಂಕರಪ್ಪ ಎಂಬವರ ಪುತ್ರ ಹದಿನೆಂಟು ತಿಂಗಳ ಮಗು ಸಿದ್ಧಾರ್ಥ ಮೃತಪಟ್ಟಿದೆ.
ಶಂಕರಪ್ಪ ಅವರ ಕುಳಾಯಿಯಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ತನ್ನ ಅಕ್ಕನೊಂದಿಗೆ ಆಟವಾಡುತ್ತಿದ್ದಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಕೆಟ್ ನಲ್ಲಿ ತುಂಬಿಸಿಟ್ಟಿದ್ದ ನೀರಿನಲ್ಲಿ ಮುಳುಗಿ ಸಿದ್ಧಾರ್ಥ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.